Job Description: * ಅಸ್ಸಾಂ ರಾಜ್ಯದಲ್ಲಿನ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಪತಿಯನ್ನು ಕಳೆದುಕೊಂಡಿರುವ ವಿಧವೆಯರಿಗೆ ತಲಾ 2.5 ಲಕ್ಷ ರೂ. ಪರಿಹಾರವನ್ನು ನೀಡಲಾಗುತ್ತದೆ ಎಂದು ಅಸ್ಸಾಂ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. * ಪ್ರಸ್ತುತ ಮುಖ್ಯಮಂತ್ರಿಯವರ ಕೋವಿಡ್-19 ವಿಧವೆಯರ ಬೆಂಬಲ ಯೋಜನೆಯ ಪರಿಹಾರದ ಅಡಿಯಲ್ಲಿ "ವಿಧವಾ ಮಾಸಾಶನ" ಯೋಜನೆಗಳ ಫಲಾನುಭವಿಗಳು ಕೂಡ ಒಂದು ಸಾರಿ ಈ ಸಹಾಯ ಧನವನ್ನು ಪಡೆಯಬಹುದಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. * ಪ್ರಸ್ತುತ ಅಸ್ಸಾಂ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಕೋವಿಡ್-19 ಸಂತ್ರಸ್ತರ ಮಾಹಿತಿಯನ್ನು ಎನ್ಎಚ್ಎಂ ಡೇಟಾ ಬೇಸ್ನಿಂದ ಪಡೆದುಕೊಂಡ ಅರ್ಹ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ, ನಂತರ ಅರ್ಹತಾ ಮಾನದಂಡಗಳನ್ನು ಪರಿಗಣಿಸಿ ನಂತರ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ಜಮೆ ಮಾಡಲಾಗುತ್ತದೆ ಎಂದು ಯೋಜನೆಯಲ್ಲಿ ತಿಳಿಸಿದ್ದಾರೆ. * ಅಸ್ಸಾಂ ರಾಜ್ಯದಲ್ಲಿ ಕೋವಿಡ್-19 ನಿಂದ ಒಟ್ಟಾರೆ 4,403 ಜನ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಬುಲೆಟಿನ್ ಮಾಹಿತಿ ನೀಡಿದೆ.