Job Description: * ಅಂತರರಾಷ್ಟ್ರೀಯ ವಿಧವೆಯರ ದಿನವನ್ನು ಜೂನ್. 23 ರಂದು ಆಚರಣೆ ಮಾಡುತ್ತಾರೆ, ಈ ದಿನವನ್ನು ವಿಧವೆಯರ ಧ್ವನಿಯನ್ನು ಗಮನಕ್ಕೆ ತರಲು ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿಸಲು ಆಚರಣೆ ಮಾಡಲಾಗುತ್ತದೆ. * ಜಗತ್ತಿನಾದ್ಯಂತ ಅಂದಾಜು 258 ಮಿಲಿಯನ್ ವಿಧವೆಯರಿದ್ದಾರೆ ಎಂದು ತಿಳಿದು ಬಂದಿದೆ. * ಅಂತರರಾಷ್ಟ್ರೀಯ ವಿಧವೆಯರ ದಿನವನ್ನು ದಿ ಲೂಂಬಾ ಫೌಂಡೇಶನ್ ಸ್ಥಾಪಿಸಿದೆ, ಈ ದಿನದಂದು ದೇಶಾದ್ಯಂತ ಇರುವಂತಹ ಲಕ್ಷಾಂತರ ವಿಧವೆಯರು ಹಾಗೂ ಅವರ ಎದುರಿಸುತ್ತಿರುವ ಬಡತನ, ಅನ್ಯಾಯವನ್ನು ಪರಿಹರಿಸುವುದು ಮತ್ತು ವಿಧವೆಯರ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. * 1954 ರಲ್ಲಿ ಲಾರ್ಡ್ ಲೂಂಬಾ ಅವರ ತಾಯಿ ಶ್ರೀಮತಿ ಪುಷ್ಪಾ ವಾಟಿ ಲೂಂಬಾ ಅವರು ವಿಧವೆಯಾದ ಹಿನ್ನಲೆಯಿಂದಾಗಿ ಈ ದಿನವನ್ನು ಆಯ್ಕೆ ಮಾಡಿಕೊಂಡು 2005 ರಲ್ಲಿ ಮೊದಲ ಅಂತರರಾಷ್ಟ್ರೀಯ ವಿಧವೆಯರ ದಿನವನ್ನು ಆಚರಣೆ ಮಾಡಲಾಯಿತು.