Job Description: * ಕೇರಳ ರಾಜ್ಯದ 2 ಜಿಲ್ಲೆಗಳಲ್ಲಿ ಈ ಯೋಜನೆ ಯಶಸ್ವಿಯಾದ ಬಳಿಕ ಕೇವಲ್'ನ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯು ಕವಲ್ ಪ್ಲಸ್ ಕಾರ್ಯಕ್ರಮವನ್ನು ಮತ್ತೇ 5 ಜಿಲ್ಲೆಗಳಿಗೆ ವಿಸ್ತರಿಸಲು ನಿರ್ಧಾರವನ್ನು ಕೈಗೊಂಡಿದೆ. * ಕೇರಳ ರಾಜ್ಯದ ಈ ಕವಲ್ ಪ್ಲಸ್ ಕಾರ್ಯಕ್ರಮವು ಆರೈಕೆ ಹಾಗೂ ರಕ್ಷಣೆಯ ಬೇಕಾಗಿರುವ ಮಕ್ಕಳಿಗೆ, ಹಾಗೂ ಲೈಂಗಿಕ ಕಿರುಕುಳದಿಂದ ಬದುಕುಳಿದಿರುವಂತವರಿಗೆ ಉತ್ತಮ ಬೆಂಬಲ ನೀಡುವದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. * ರಾಜ್ಯದ ತಿರುವನಂತಪುರಂ ಜಿಲ್ಲೆಯ ಸರಿ ಸುಮಾರು 300 ಮಕ್ಕಳು ಹಾಗೂ ಪಾಲಕ್ಕಾಡ್ ಜಿಲ್ಲೆಯ 150 ಮಕ್ಕಳಿಗೆ ಈ ಯೋಜನೆಯಿಂದ ಉಪಯೋಗವಾಗಿದೆ. * 2020 ರ ಡಿಸೆಂಬರ್ ತಿಂಗಳಿನಲ್ಲಿ ಕೇರಳದ ಎರಡು ಜಿಲ್ಲೆಗಳಾಗಿರುವ ತಿರುವನಂತಪುರಂ ಹಾಗೂ ಪಾಲಕ್ಕಾಡ್'ನಲ್ಲಿ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. * ಈ ಯೋಜನೆಯನ್ನು ಮಕ್ಕಳೊಂದಿಗೆ ಕೆಲಸ ಮಾಡುವ ಪರಿಣಿತಿಯನ್ನು ಹೊಂದಿರುವ NGO ಗಳ ಸಹಾಯದೊಂದಿಗೆ ಜಾರಿತರಲಾಗುತ್ತದೆ ಎಂದು ತಿಳಿಸಲಾಗಿದೆ.