Job Description: * ಕೇಂದ್ರ ಮತ್ತು ಮಿಜೋರಾಂ ರಾಜ್ಯ ಸರ್ಕಾರಗಳು ವಿಶ್ವಬ್ಯಾಂಕ್ ಜೊತೆಗೆ '32' ಮಿಲಿಯನ್ ಮೌಲ್ಯದ ಸಾಲ ಒಪ್ಪಂದಕ್ಕೆ ಸಹಿ ಹಾಕಿವೆ. * ಮಿಜೋರಾಂ'ನ ಹೆಲ್ತ್ ಸಿಸ್ಟಮ್ಸ್'ನ್ನು ಬಲಪಡಿಸುವ ಯೋಜನೆ ಉದ್ದೇಶದಿಂದಾಗಿ ಈ ಸಾಲ ಒಪ್ಪಂದಕ್ಕೆ ಸಹಿ ಹಾಕಲಾಗಿದೆ, ಪ್ರಸ್ತುತ ಈ ಒಪ್ಪಂದದಿಂದ ಮಿಜೋರಾಂ ರಾಜ್ಯದಲ್ಲಿನ ಆರೋಗ್ಯ ಸೇವೆಗಳ ಗುಣಮಟ್ಟವು ಸುಧಾರಿಸಲಿದೆ ಎಂದು ತಿಳಿಸಲಾಗಿದೆ. * ಮಿಜೋರಾಂ ಹೆಲ್ತ್ ಸಿಸ್ಟಮ್ಸ್ ಯೋಜನೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಜೊತೆಗೆ ಅಂಗಸಂಸ್ಥೆಗಳ ಆಡಳಿತ ಮತ್ತು ನಿರ್ವಹಣಾ ಕಾರ್ಯವನ್ನು ಉತ್ತಮಗೊಳಿಸಲಿದೆ, ಹಾಗೂ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ಇದರ ಜೊತೆಯಲ್ಲಿ ಆಸ್ಪತ್ರೆಯ ಸೇವೆಗಳಿಗೆ ಹಣಕಾಸಿನ ಕೊರತೆಗಳನ್ನು ನಿವಾರಿಸುವ ಉದ್ದೇಶವಾಗಿದೆ. * ಪ್ರಸ್ತುತ ಈ ಮಿಜೋರಾಂ ರಾಜ್ಯದ ಹೆಲ್ತ್ ಸಿಸ್ಟಮ್ಸ್ ಯೋಜನೆಯು 8 ಜಿಲ್ಲೆಗಳ ಜನರಿಗೆ ಪ್ರಯೋಜನ ನೀಡಲಿದೆ.