Job Description: * ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಯೋಜನೆಗೆ ಪಶ್ಚಿಮ ಬಂಗಾಳ ಕ್ಯಾಬಿನೆಟ್ ಜೂನ್. 24 ರಂದು ಅನುಮೋದನೆ ನೀಡಿದೆ. ಈ ಹಿಂದೆ ಪಶ್ಚಿಮ ಬಂಗಾಳ ರಾಜ್ಯದ ತೃಣಮೂಲ ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಈ ಯೋಜನೆಯನ್ನು ಆರಂಭಿಸುವದಾಗಿ ತಿಳಿಸಿತ್ತು. * ವಿದ್ಯಾರ್ಥಿಗಳ ಕ್ರೆಡಿಟ್ ಕಾರ್ಡ್ ಯೋಜನೆಯ 2021ರ ಜೂನ್. 30 ಜಾರಿಗೆ ತಂದು ಆರಂಭ ಮಾಡಲಿದ್ದಾರೆ. * ಪ್ರಸ್ತುತ ವಿದ್ಯಾರ್ಥಿ ಉನ್ನತ ಶಿಕ್ಷಣಕ್ಕೆ ಸೇರಲು ಕ್ರೆಡಿಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಭಾರತದಲ್ಲಿ ಹಾಗೂ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ 10 ಲಕ್ಷ ರೂ. ಮೃದು ಸಾಲ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಪಶ್ಚಿಮ ಬಂಗಾಳ ರಾಜ್ಯದ ಯಾವದೇ ಒಬ್ಬ ವ್ಯಕ್ತಿಯು 40 ವರ್ಷ ವಯಸ್ಸಿನವರೆಗೆ ಯೋಜನೆ ಅಡಿಯಲ್ಲಿ ಸಾಲ ಪಡೆಯಬಹುದಾಗಿದೆ, ಈ ಸಾಲವನ್ನು ಮರುಪಾವತಿಸಲು ಸಾಲ ಪಡೆದ ವಿದ್ಯಾರ್ಥಿಗಳಿಗೆ 15 ವರ್ಷಗಳವರೆಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.