Job Description: * ಖ್ಯಾತ ಕರ್ನಾಟಕ ಸಂಗೀತಗಾರ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಪರಸ್ಸಲ ಬಿ. ಪೊನ್ನಮ್ಮಾಳ್ ಅವರು ತಮ್ಮ 96 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. * ಪೊನ್ನಮ್ಮಾಳ್ ಅವರು ಸುಮಾರು 8 ದಶಕಗಳಿಂದ ಶಾಸ್ತ್ರೀಯ ಸಂಗೀತ ಕಛೇರಿಗಳ ಮೂಲಕ ಜನರ ಮನಸೆಳೆದಿದ್ದರು. * ಪೊನ್ನಮ್ಮಾಳ್ ಅವರು 1940 ರಲ್ಲಿ ಸ್ವಾತಿ ತಿರುನಾಳ್ ಸಂಗೀತ ಕಾಲೇಜಿಗೆ ದಾಖಲಾದ ಮೊದಲ ಮಹಿಳೆಯಾಗಿದ್ದಾರೆ, ಹಾಗೂ ಇವರು ಇದೇ ಕಾಲೇಜಿನ ಮೊದಲ ಮಹಿಳಾ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ, ಹಾಗೂ ತ್ರಿಪುನಿಥುರಾದ ಆರ್ಎಲ್ವಿ ಕಾಲೇಜ್ ಆಫ್ ಮ್ಯೂಸಿಕ್ ಅಂಡ್ ಫೈನ್ಸ್ ಆರ್ಟ್ಸ್ಗೆ ಮೊದಲ ಮಹಿಳಾ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸಿದ್ದಾರೆ. * ಪರಸ್ಸಲ ಬಿ. ಪೊನ್ನಮ್ಮಾಳ್ ಅವರು 2017 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.