Job Description: * ಪ್ರಸ್ತುತ ಕೋವಿಡ್-19 ಲಸಿಕೆ ಅಭಿಯಾನ ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ ಗರಿಷ್ಠ ಸಂಖ್ಯೆಯಲ್ಲಿ ಲಸಿಕೆ ನೀಡಿದ್ದಾರೆ, ಹಾಗೂ ಕೇಂದ್ರ ಸರ್ಕಾರವು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವದಾಗಿ ತಿಳಿಸಿದೆ. * ಪ್ರಸ್ತುತ ಲಸಿಕಾ ಮಾರ್ಗಸೂಚಿ ಅಸ್ತಿತ್ವಕ್ಕೆ ಬಂದ ನಂತರ ಮೊದಲ ದಿನವೇ ಸರಿ ಸುಮಾರು 81 ಲಕ್ಷ ಕೋವಿಡ್-19 ಡೋಸ್ ಲಸಿಕೆಯನ್ನು ನೀಡಿದ್ದೇವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. * ಭಾರತ ದೇಶದಾದ್ಯಂತ ಇಲ್ಲಿಯವರೆಗೆ 28.7 ಕೋಟಿ ಕೋವಿಡ್-19 ಡೋಸ್ ಲಸಿಕೆಯನ್ನು ನೀಡಿದೆ, ಶೇ.17 ರಷ್ಟು ಜನರಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಿದೆ ಎಂದು ತಿಳಿಸಿದ್ದಾರೆ. * ಮಧ್ಯ ಪ್ರದೇಶ ರಾಜ್ಯವು ಸುಮಾರು15.4 ಲಕ್ಷ ಡೋಸ್ ಲಸಿಕೆ ನೀಡಿದೆ, ಅದರಲ್ಲೂ ಅತೀ ಹೆಚ್ಚು ಲಸಿಕೆ ನೀಡಿದ ರಾಜ್ಯಗಳ ಪೈಕಿ ಮೊದಲ ಸಾಲಿನಲ್ಲಿದೆ. * ಕರ್ನಾಟಕ ರಾಜ್ಯದಲ್ಲಿ 10.67 ಲಕ್ಷ ಡೋಸ್ ಲಸಿಕೆ ನೀಡಿ 2 ನೇ ಸ್ಥಾನದಲ್ಲಿದೆ, ಅದರಲ್ಲಿ ಬೆಂಗಳೂರು ನಗರದಲ್ಲಿಯೇ 2.14 ಲಕ್ಷ ಡೋಸ್ ಲಸಿಕೆಯನ್ನು ಹಾಕಲಾಗಿದೆ ಎಂದು ತಿಳಿಸಿದ್ದಾರೆ. * ಉತ್ತರ ಪ್ರದೇಶ ರಾಜ್ಯವು ಸುಮಾರು 6.74 ಲಕ್ಷ ಡೋಸ್ ಲಸಿಕೆ ನೀಡಿ 3 ನೇ ಸ್ಥಾನದಲ್ಲಿದೆ.