Job Description: * ಪ್ರಸ್ತುತ ಕೇಂದ್ರಾಡಳಿತ ಪ್ರದೇಶವಾಗಿರುವ ಪೂರ್ವ ಲಡಾಖ್ ಗಡಿ ಪ್ರದೇಶದಲ್ಲಿನ ಜನಗಳು ಅಭಿವೃದ್ಧಿ ಹೊಂದಲು ಇಚ್ಛೆಪಡುತ್ತಿದ್ದಾರೆ ಇದರಿಂದಾಗಿ ಈ ಪ್ರದೇಶದಲ್ಲಿ ಸೇನಾ ಚಟುವಟಿಕೆಗಳನ್ನು ನಿಷ್ಕ್ರೀಯಗೊಳಿಸುವ ಅಗತ್ಯ ವಿದೆ, ಈ ಕಾರಣದಿಂದಾಗಿ ಚೀನಾ ಮತ್ತು ಭಾರತದ ನಡುವೆ ರಾಜತಾಂತ್ರಿಕ ಸಭೆ ನಡೆಯಲಿದೆ. * ಈ ರಾಜತಾಂತ್ರಿಕ ಸಭೆಯಲ್ಲಿ ಭಾರತ-ಚೀನಾ ಗಡಿ ವ್ಯವಹಾರಗಳ ಸಮಾಲೋಚನೆ ಹಾಗೂ ಸಮನ್ವಯ ಕಾರ್ಯ ವಿಧಾನದ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ. * ಭಾರತ ಮತ್ತು ಚೀನಾ ದೇಶಗಳ ನಡುವೆ ಇದೆ ಜೂನ್ 24 ರಂದು ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆ ನಡೆಯಲಿದೆ. * ಮಿಲಿಟರಿ ಅಧಿಕಾರಿಗಳು ತಿಳಿಸಿರುವ ವರದಿಯ ಪ್ರಕಾರ ಭಾರತ ಹಾಗೂ ಚೀನಾದ ಗಡಿ ಪ್ರದೇಶಗಳಲ್ಲಿ 50,000 ದಿಂದ 60,000 ಸೈನಿಕರನ್ನು ನಿಯೋಜಿಸಿಲಾಗಿದೆ ಎಂದು ತಿಳಿಸಿದ್ದಾರೆ.