Job Description: * ಅಮೆರಿಕದಲ್ಲಿ ಗುಲಾಮಗಿರಿ ಅಂತ್ಯಗೊಳಿಸಿದ ಸವಿ ನೆನಪಿಗಾಗಿ ಆಚರಿಸುವ 'ಜೂನ್ಟೀನ್ತ್' (ಜೂನ್. 19) ದಿನದಂದು ಅಧ್ಯಕ್ಷ ಜೋ ಬೈಡನ್ ಅವರು ರಜೆ ಘೋಷಣೆ ಮಾಡಿದ್ದಾರೆ, ಇದನ್ನು ಕಪ್ಪುವರ್ಣೀಯರು ಸ್ವಾಗತ ಮಾಡುವದರ ಜೊತೆ ಸಂಭ್ರಮಾಚರಣೆ ಮಾಡಿದ್ದಾರೆ. * ಇದೇ ಜೂನ್. 17 ರಂದು ರಾಷ್ಟ್ರೀಯ ಸ್ವಾತಂತ್ರ್ಯ ದಿನ ಕಾಯ್ದೆಯ 'ಜೂನ್ಟೀನ್ತ್'ಗೆ ಅಧ್ಯಕ್ಷ ಜೋ ಬೈಡನ್ ಅವರು ಸಹಿ ಹಾಕಿದ್ದಾರೆ. * ಇತ್ತೀಚಿಗೆ ಅಮೇರಿಕದಲ್ಲಿ ಜನಾಂಗೀಯ ದ್ವೇಷದ ಪ್ರಕರಣಗಳು ಹೆಚ್ಚುತ್ತಿವೆ ಈ ಸಂಧರ್ಭದಲ್ಲಿ ಅಧ್ಯಕ್ಷ ಜೋ ಬೈಡನ್ ಅವರು ಈ ಕ್ರಮವನ್ನು ಕೈಗೊಂಡಿದ್ದಾರೆ, ಈ ಕ್ರಮದ ಜೊತೆಯಲ್ಲಿ ಬದಲಾವಣೆ ತರುವ ನಿರ್ಧಾರಗಳನ್ನು ಕೈಗೊಳ್ಳಬೇಕು ಹಾಗೂ ನಮ್ಮ ಮತದಾನದ ಹಕ್ಕನ್ನು ರಕ್ಷಿಸಬೇಕು ಎಂದು ಕನ್ಸಾಸ್ ಪಟ್ಟಣದ ಅರ್ಬನ್ ಲೀಗ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ವೆನ್ ಗ್ರ್ಯಾಂಟ್ ಅವರು ತಿಳಿಸಿದ್ದಾರೆ. * ಪ್ರತಿ ವರ್ಷವು ಅಮೇರಿಕದಲ್ಲಿ ಜೂನ್. 19 ರಂದು ಗುಲಾಮಗಿರಿ ಅಂತ್ಯಗೊಳಿಸಿರುವ ದಿನ ಆಚರಣೆ ಮಾಡಲಾಗುತ್ತದೆ, ಈ ಹಿಂದೆ ಕಪ್ಪು ವರ್ಣೀಯ ಜನರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸುವುದನ್ನು 1865 ರ ಜೂನ್.19 ರಂದು ಟೆಕ್ಸಾಸ್ನ ಗಾಲ್ವೆಸ್ಟಾನ್ನಲ್ಲಿ ಘೋಷಣೆ ಮಾಡಲಾಗಿತ್ತು, ಮತ್ತೇ 1980 ರಿಂದಲೇ ಜೂನ್. 19 ರಂದು ಟೆಕ್ಸಾಸ್ನಲ್ಲಿ ರಜೆ ಘೋಷಣೆ ಮಾಡಲಾಗಿದೆ, ಪ್ರಸ್ತುತ ರಜೆ ಘೋಷಣೆ ಮಾಡಿದ ಮೊದಲ ರಾಜ್ಯವಾಗಿದೆ.