Job Description: * ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಬೇರೆ ಬೇರೆ ದೇಶಗಳ ಗಡಿ ಸ್ಥಗಿತಗೊಂಡಿವೆ, ಇದರ ನಡುವೆ ಕಳೆದ ವರ್ಷ ಯುದ್ಧ, ಗಲಭೆ ಇನ್ನಿತರ ಕಾರಣಗಳಿಂದಾಗಿ '3' ಮಿಲಿಯನ್ಗೂ ಹೆಚ್ಚು ಜನರು ಮನೆ ಮಠ ಬಿಟ್ಟು ಹೊರ ಹೋಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜನ್ಸಿಯು ಮಾಹಿತಿಯನ್ನು ನೀಡಿದೆ. * ಪ್ರಸ್ತುತ ವಿಶ್ವಸಂಸ್ಥೆಯ ವಾರ್ಷಿಕ ವರದಿಯ ಪ್ರಕಾರ ಜರ್ಮನಿ ದೇಶದ ಜನಸಂಖ್ಯೆಯಷ್ಟು ಜನರು ಅಂದರೆ 82.4 ಮಿಲಿಯನ್'ಗೂ ಹೆಚ್ಚು ಜನ ಮನೆ ಮಠ ಕಳೆದುಕೊಂಡು ಬೀದಿ ಬೀದಿ ಅಲೆಯುತ್ತಿದ್ದಾರೆ ಎಂದು ಉಲ್ಲೇಖಮಾಡಿದೆ. * ಪ್ರಸ್ತುತ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ಫಿಲಿಪ್ಪೋ ಗ್ರಾಂಡಿ ಅವರು ನೀಡಿರುವ ಮಾಹಿತಿಯ ಪ್ರಕಾರ ಮೊಝೋಂಬಿಕ್, ಈಥಿಯೋಪಿಯಾ ಹಾಗೂ ಆಫ್ರಿಕಾದ ಕೆಲ ರಾಷ್ಟ್ರಗಳ ಸಾವಿರಾರು ಜನರು ಹವಾಮಾನ ಬದಲಾವಣೆ ಹಾಗೂ ಸಮುದಾಯಗಳ ಅಥವಾ ವರ್ಗಗಳ ಸಂಘರ್ಷಗಳಿಂದ ಪ್ರತಿವರ್ಷ ನಿರಾಶ್ರಿತರಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.