Job Description: * ಪ್ರಸ್ತುತ ಮುರ್ಡೇಶ್ವರದ ಶಿವನ ಮೂರ್ತಿಗೆ ಗ್ಲೋಬಲ್ ಪೀಪಲ್ಸ್ ಚಾಯ್ಸ್ ಅವಾರ್ಡ್ ಲಭಿಸಿದೆ, ಈ ಮೂರ್ತಿಯು ವಿಶ್ವದ 2 ನೇ ಅತಿ ಎತ್ತರದ ಶಿವನ ವಿಗ್ರಹ ಎಂಬ ಖ್ಯಾತಿ ಪಡೆದಿದೆ. * ಅಂತಾರಾಷ್ಟ್ರೀಯ ಫಿಲಿಪ್ಸ್ ಕಂಪನಿ ಆಯೋಜಿಸಿದ ಸ್ಪರ್ಧೆಯಲ್ಲಿ ಮುರ್ಡೇಶ್ವರ ಶಿವನ ಮೂರ್ತಿ ಸೇರಿದಂತೆ ವಿಶ್ವದ 25 ಪ್ರಸಿದ್ಧ ತಾಣಗಳು ನಾಮ ನಿರ್ದೇಶನವಾಗಿದ್ದವು. * ಅಂತಾರಾಷ್ಟ್ರೀಯ ಫಿಲಿಪ್ಸ್ ಕಂಪನಿ ಆಯೋಜಿಸಿದ ಸ್ಪರ್ಧೆಗೆ ಸಾರ್ವಜನಿಕರು ಆನ್ಲೈನ್ ಮೂಲಕ ವೋಟಿಂಗ್ ಮಾಡಲು ಅವಕಾಶ ನೀಡಲಾಗಿತ್ತು, ಈ ವೋಟಿಂಗ್ ಸ್ಪರ್ಧೆಯಲ್ಲಿ ಒಟ್ಟಾರೆ 6800 ಜನ ವಿವಿಧ ತಾಣಗಳ ಬಗ್ಗೆ ಮತ ಚಲಾಯಿಸಿದ್ದಾರೆ, ಇದರಲ್ಲಿ ಮುರ್ಡೇಶ್ವರದ ಶಿವನಮೂರ್ತಿ ಶೇ.40 ಅಂದರೆ 2500ಕ್ಕೂ ಹೆಚ್ಚು ವೋಟ್ ಪಡೆದುಕೊಂಡು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. * ಪ್ರಸ್ತುತ ಈ ವರ್ಷ ಮುರ್ಡೇಶ್ವರದ ಶಿವನ ವಿಗ್ರಹಕ್ಕೆ ವಿಶೇಷ ಲೈಟಿಂಗ್ ವ್ಯವಸ್ಥೆಯನ್ನು RNS ಮೋರ್ಟಸ್ ಕಂಪನಿಯು ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ ಮಾಡಿದೆ.