Job Description: * ಪ್ರಸ್ತುತ ಅಮೇರಿಕ ಮೂಲದ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಯು ನಡೆಸಿದ ವಿಶ್ವದ ನಾಯಕರುಗಳ ಸಮೀಕ್ಷೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶೇ.66 ರಷ್ಟು ಜನರು(ರೇಟಿಂಗ್) ಅನುಮೋದಿಸಿದ್ದಾರೆ ಎಂದು ತಿಳಿಸಿದೆ. * ಈ ಹಿಂದೆ 2019 ರ ಆಗಸ್ಟ್'ನಲ್ಲಿ ಶೇ.82 ರಷ್ಟು ಜನರು ಮೋದಿ ಅವರನ್ನು(ರೇಟಿಂಗ್) ಅನುಮೋದಿಸಿದ್ದರು, ಆದರೆ ಪ್ರಸ್ತುತ ವರ್ಷದಲ್ಲಿ ಸುಮಾರು 20 ರಷ್ಟು ಪಾಯಿಂಟ್ ಕಡಿಮೆಯಾದರೂ ಪ್ರಪಂಚದ ಇತರ ನಾಯಕರಿಗಿಂತ ಮೋದಿ ಮುಂಚೂಣಿಯಲ್ಲಿದ್ದಾರೆ. * ಬೇರೆ ಬೇರೆ ದೇಶಗಳಲ್ಲಿ ಆಡಳಿತ ನಡೆಸುವ ನಾಯಕರ ಬಗ್ಗೆ ಸಾರ್ವಜನಿಕರು ಹೊಂದಿರುವ ಅಭಿಪ್ರಾಯವನ್ನು ಅಮೇರಿಕನ್ ಡಾಟಾ ಇಂಟೆಲಿಜೆನ್ಸ್ ಏಜೆನ್ಸಿ "ಮಾರ್ನಿಂಗ್ ಕನ್ಸಲ್ಟ್" ಸಂಸ್ಥೆಯು ಪತ್ತೆ ಮಾಡುತ್ತದೆ, ಪ್ರಸ್ತುತ ಈ ಸಂಸ್ಥೆಯು ಗುಪ್ತಚರ ಸಂಸ್ಥೆಗಳ ಮೂಲಕ ರಾಜಕೀಯ ಮಾಹಿತಿ ಸಂಗ್ರಹಿಸಿ ಪ್ರಕಟಿಸುತ್ತದೆ. * ಪ್ರಸ್ತುತ 13 ದೇಶಗಳಾಗಿರುವ ಅಮೆರಿಕಾ, ಯುಕೆ, ರಷ್ಯಾ, ಕೆನಡಾ, ಬ್ರೆಜಿಲ್, ಫ್ರಾನ್ಸ್ ಹಾಗೂ ಜರ್ಮನಿ ಸೇರಿ ಅನೇಕ ರಾಷ್ಟ್ರಗಳ ವಿಶ್ವ ನಾಯಕರಿಗಿಂತ ಭಾರತದ ಪ್ರಧಾನಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದಾರೆ ಎಂದು ಮಾರ್ನಿಂಗ್ ಕನ್ಸಲ್ಟ್ ತಿಳಿಸಿದೆ. * ಅಮೇರಿಕ ಅಧ್ಯಕ್ಷ ಜೋ ಬೈಡನ್, ಶೇ.53 ರಷ್ಟು ರೇಟಿಂಗ್ ಪಡೆದಿದ್ದಾರೆ, ಆದರೆ ಜಪಾನಿನ ಪ್ರಧಾನಿ ಯೋಶಿಹಿಡೆ ಸುಗಾ ಅವರು ಕೇವಲ ಶೇ. 29 ರೇಟಿಂಗ್ ಪಡೆದುಕೊಂಡಿದ್ದಾರೆ.