Job Description: * ಬೆಂಗಳೂರಿನ ಥ್ರೋಟಲ್ ಏರೋಸ್ಪೇಸ್ ಸಿಸ್ಟಮ್ಸ್ ನೇತೃತ್ವದ ಸಂಸ್ಥೆಗಳ ಒಕ್ಕೂಟದಿಂದ ಭಾರತದ ಮೊದಲ ವೈದ್ಯಕೀಯ ಡ್ರೋನ್ ವಿತರಣಾ ಪ್ರಯೋಗವು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಎಂಬ ತಾಲೂಕಿನಲ್ಲಿ ಆರಂಭವಾಗಲಿದೆ, 2020 ರ ಮಾರ್ಚ್ ತಿಂಗಳಿನಲ್ಲಿ ಈ ಡ್ರೋನ್ ಪ್ರಯೋಗವು ವಸ್ತು ವಿತರಣಾ ಪ್ರಯೋಗಗಳಿಗೆ ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಂದ ಅನುಮೋದನೆ ಪಡೆದುಕೊಂಡಿತ್ತು. * ಪ್ರಸ್ತುತ ಥ್ರೋಟಲ್ ಏರೋಸ್ಪೇಸ್ ಸಿಸ್ಟಮ್ಸ್ ನೇತೃತ್ವದ ಸಂಸ್ಥೆ ಈ ಡ್ರೋನ್ ಪ್ರಯೋಗವು 30-45 ದಿನಗಳವರೆಗೆ ನಡೆಸಲಿದೆ. * ಪ್ರಸ್ತುತ ಡ್ರೋನ್ʼಗಳಲ್ಲಿ ರಾಂಡಿಂಟ್ ಎಂಬ ಡೆಲಿವರಿ ಸಾಫ್ಟ್ ವೇರ್ ಬಳಸಲಾಗಿದೆ ಹಾಗೂ ಇವುಗಳಲ್ಲಿ ಎರಡು ವಿಧಗಳಿವೆ, ಒಂದು ಸಣ್ಣ ಮೆಡ್ ಕಾಪ್ಟರ್ ಡ್ರೋನ್ 1 KG ವರೆಗೆ ವೈದ್ಯಕೀಯ ಉಪಕರಣಗಳನ್ನು 15 ಕಿ.ಮೀ ವ್ಯಾಪ್ತಿಯವರೆಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ, ಇನ್ನೊಂದು ವಿಧದ ಡ್ರೋನ್ 2 KG ಉಪಕರಣಗಳನ್ನು 12 ಕಿ.ಮೀವರೆಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿದು ಬಂದಿದೆ.