Job Description: * ಸರ್ಕಾರ ಮತ್ತು ಆಂಗ್ಲೊ ಅಮೆರಿಕನ್ಸ್ ಡೆ ಬೀರ್ಸ್ನ ಜಂಟಿ ಸಂಸ್ಥೆಯ ಸಹಭಾಗಿತ್ವದಲ್ಲಿ ವಿಶ್ವದ 3 ನೇ ಅತಿ ದೊಡ್ಡ ವಜ್ರವನ್ನು ಗ್ಯಾಬೋರೋನ್ (ಬೋಟ್ಸ್ವಾನಾ)ದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ರಾಯಿಟರ್ಸ್ ಸುದ್ದಿವಾಹಿನಿಯು ಮಾಹಿತಿ ನೀಡಿದೆ. * ಬೋಟ್ಸ್ವಾನಾದ ಗಣಿಗಾರಿಕೆ ಮಾಡುವ ಪ್ರದೇಶದಲ್ಲಿ ವಜ್ರದ ಕಂಪನಿ ಡೆಬ್ಸ್ವಾನಾ 1,098 ಕ್ಯಾರೆಟ್ ವಜ್ರವನ್ನು ಪತ್ತೆ ಹಚ್ಚಿದ್ದಾರೆ, ಈ ವಜ್ರವನ್ನು ಡೈಮಂಡ್ ಕಂಪನಿಯ ಹಂಗಾಮಿ ವ್ಯವಸ್ಥಾಪಕ ನಿರ್ದೇಶಕ ಲಿನೆಟ್ ಆರ್ಮ್ ಸ್ಟ್ರಾಂಗ್ ಅವರು ಬೋಟ್ಸ್ವಾನಾ ಅಧ್ಯಕ್ಷರಿಗೆ ನೀಡಿದ್ದಾರೆ. * ಈ ಹಿಂದೆ ದಕ್ಷಿಣ ಆಫ್ರಿಕಾದ ಗಣಿಗಾರಿಕೆಯ ಪ್ರದೇಶದಲ್ಲಿ ಅಂದರೆ 1905 ರಲ್ಲಿ ವಿಶ್ವದ ಅತಿ ದೊಡ್ಡ ಸುಮಾರು 3,106 ಕ್ಯಾರೆಟ್ ವಜ್ರವನ್ನು ಪತ್ತೆ ಮಾಡಲಾಗಿತ್ತು, ಹಚ್ಚಲಾಗಿತ್ತು, ಮತ್ತೆ 2015ರಲ್ಲಿ ಬೋಟ್ಸ್ವಾನಾದಲ್ಲಿ 1,109 ಕ್ಯಾರೆಟ್ "ಲೆಸೆಡಿ ಲಾ ರೋನ" ಎಂಬ ವಜ್ರವನ್ನು ಲುಕಾರಾ ಡೈಮಂಡ್ಸ್ ಕಂಪನಿಯ ಪತ್ತೆ ಮಾಡಿತ್ತು, ಇದೀಗ ಈ ವಜ್ರವು ವಿಶ್ವದ 2ನೇ ಅತಿ ದೊಡ್ಡ ವಜ್ರವಾಗಿದೆ ಎಂದು ತಿಳಿದು ಬಂದಿದೆ. * ಡೆಬ್ಸ್ವಾನಾ ಎಂಬ ವಜ್ರದ ಕಂಪನಿಯ 50 ವರ್ಷಗಳ ಇತಿಹಾಸದಲ್ಲಿ ಪತ್ತೆ ಹಚ್ಚಿರುವ ಅತೀ ದೊಡ್ಡ ವಜ್ರ ಇದಾಗಿದೆ ಎಂದು ಡೈಮಂಡ್ ಕಂಪನಿಯ ಹಂಗಾಮಿ ವ್ಯವಸ್ಥಾಪಕ ನಿರ್ದೇಶಕ ಲಿನೆಟ್ ಆರ್ಮ್ಸ್ಟ್ರಾಂಗ್ ಹೇಳಿದರು.