Job Description: * ಭಾರತದ ವ್ಯಕ್ತಿಗಳು ಹಾಗೂ ಇತರೆ ಸಂಸ್ಥೆಗಳಿಂದ ಸ್ವಿಸ್ ಬ್ಯಾಂಕ್ಗಳಲ್ಲಿ ಇಟ್ಟಿರುವ ಹಣದ ಮೊತ್ತವು 2020 ರಲ್ಲಿ 20,706 ಕೋಟಿ ರೂ.ಗೆ ಏರಿಕೆಯಾಗಿದೆ, ಭಾರತೀಯ ವ್ಯಕ್ತಿಗಳು ಬೇರೆ ಬೇರೆ ಹಣಕಾಸು ಉತ್ಪನ್ನಗಳ ಮೂಲಕ ಸ್ವಿಸ್ ಬ್ಯಾಂಕ್'ನಲ್ಲಿ ಇಷ್ಟು ಮೊತ್ತದ ಹಣವನ್ನು ಇಟ್ಟಿದ್ದಾರೆ. * ಭಾರತೀಯ ವ್ಯಕ್ತಿಗಳು ಇಟ್ಟಿರುವ ಹಣದ ಮೊತ್ತವು 13 ವರ್ಷಗಳಲ್ಲಿನ ಅತಿಹೆಚ್ಚಿನ ಮೊತ್ತವಾಗಿದೆ, ಈ ಹಣದ ಮೊತ್ತವು ಸ್ವಿಸ್ ಬ್ಯಾಂಕ್ಗಳು ಸ್ವಿಸ್ ನ್ಯಾಷನಲ್ ಬ್ಯಾಂಕ್ಗೆ ನೀಡಿರುವ ಅಧಿಕೃತ ಮಾಹಿತಿ ಇದಾಗಿದೆ, ಆದರೆ ಭಾರತೀಯರು ಇಟ್ಟಿರುವ ಈ ಹಣವು ಕಪ್ಪುಹಣಕ್ಕೆ ಸಂಬಂಧಿಸಿಲ್ಲ ಎಂದಿದ್ದಾರೆ.