Job Description: * ವಿಶ್ವದ ದೈತ್ಯ ಕಂಪೆನಿ ಯಾಗಿರುವ ಗೂಗಲ್ ಇದೀಗ ನ್ಯೂಯಾರ್ಕ್ ನಗರದಲ್ಲಿ ತನ್ನದೇ ಆದ ಶೋರೂಂನ್ನು ಪ್ರಾರಂಭ ಮಾಡಿದೆ ಹಾಗೂ ಇದು ಗೂಗಲ್ ಕಂಪೆನಿಯ ವಿಶ್ವದ ಮೊಟ್ಟಮೊದಲ ಶೋರೂಂ ಆಗಿದೆ. * ಪ್ರಸ್ತುತ ಈ ಗೂಗಲ್'ನ ಶೋರೂಂನಲ್ಲಿ ತನ್ನದೇ ಆದ ಅಂದರೆ ಗೂಗಲ್'ನ ಪರಿಕರಗಳಾದ ಪಿಕ್ಸೆಲ್ ಫೋನ್'ಗಳು, ನೆಸ್ಟ್ ಬ್ರಾಂಡ್ನ ಎಲೆಕ್ಟ್ರಾನಿಕ್ ವಸ್ತುಗಳು, ಫಿಟ್ಬಿಟ್ ಉತ್ಪನ್ನಗಳು ಹಾಗೂ ಪಿಕ್ಸೆಲ್ ಬುಕ್ಗಳ ಪ್ರಾತ್ಯಕ್ಷಿಕೆಯನ್ನು ಈ ಶೋರೂಂನಲ್ಲಿ ಪಡೆಯಬಹುದು, ಜೊತೆಗೆ ಆ ವಸ್ತುಗಳ ಬಳಕೆಯಿಂದ ಆಗುವ ಉಪಯೋಗಗಳ ಬಗ್ಗೆಯ ಕೂಡ ತಿಳಿದುಕೊಳ್ಳಬಹುದಾಗಿದೆ.