Job Description: * ಕೊರೋನಾ ಸಾಂಕ್ರಾಮಿಕ ರೋಗದ ಮೊದಲನೇ ಮತ್ತು ಎರಡನೇ ಅಲೆಯಿಂದ ಇಡೀ ವಿಶ್ವವೇ ಅಲುಗಾಡಿ ಹೋಗಿದೆ, ಇದೀಗ ಜಗತ್ತಿನಾದ್ಯಂತ 40 ಲಕ್ಷಕ್ಕೂ ಹೆಚ್ಚು ಜನರು ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆ(ಮೃತಪಟ್ಟಿದ್ದಾರೆ) ಎಂದು ರಾಯಿಟರ್ಸ್ ವರದಿಯನ್ನು ಪ್ರಕಟಿಸಿದೆ. * ಇತ್ತೀಚಿಗೆ ಅಮೆರಿಕ ಹಾಗೂ ಬ್ರಿಟನ್ ದೇಶಗಳಲ್ಲಿ ಹೊಸ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ತಿಳಿದು ಬಂದಿದೆ ಆದರೆ ಡೆಲ್ಟಾ ರೂಪಾಂತರ ವೈರಸ್ ಪ್ರಬಲವಾಗಿದೆ ಇದರಿಂದಾಗಿ ಹಲವು ರಾಷ್ಟ್ರಗಳು ಕೋವಿಡ್-19 ಲಸಿಕೆಯ ಕೊರತೆಯನ್ನು ಎದುರಿಸುತ್ತಿವೆ ಎಂದು ರಾಯಿಟರ್ಸ್ ಮಾಹಿತಿಯನ್ನು ನೀಡಿದೆ. * ಈ ಹಿಂದೆ ಕೋವಿಡ್-19 ಸಂಬಂಧಿತ ಸಾವಿನ ಸಂಖ್ಯೆ 20 ಲಕ್ಷಕ್ಕೆ ತಲುಪಲು ಒಂದು ವರ್ಷಗಳ ಕಾಲಾವಕಾಶವನ್ನು ತೆಗೆದುಕೊಂಡಿತು, ಆದರೆ ಇನ್ನುಳಿದ 20 ಲಕ್ಷ ಸಾವುಗಳು ಕೇವಲ166 ದಿನಗಳಲ್ಲಿ ದಾಖಲಾಗಿವೆ ಎಂದು ರಾಯಿಟರ್ಸ್ ತಿಳಿಸಿದೆ. * ವಿಶ್ವದಲ್ಲಿನ ಒಟ್ಟು ಸಾವಿನ ಪ್ರಕರಣಗಳಲ್ಲಿ ಶೇ. 50 ರಷ್ಟು ಸಾವುಗಳು ಅಮೆರಿಕ, ಬ್ರೆಜಿಲ್, ಭಾರತ, ರಷ್ಯಾ ಮತ್ತು ಮೆಕ್ಸಿಕೊ ದೇಶಗಳಲ್ಲಿ ಸಾವಿನ ಪ್ರಕರಣಗಳು ಸಂಭವಿಸಿವೆ. * ಭಾರತದಲ್ಲಿ ಇಲ್ಲಿಯವರೆಗೆ ಒಟ್ಟಾರೆ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಮೃತರ ಸಂಖ್ಯೆ 3,81,903.