Job Description: * ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೋಂಗ್ ಉನ್ ಅವರು ಪ್ರಸ್ತುತ ಕೋವಿಡ್-19, ಚಂಡಮಾರುತ ಹಾಗೂ ಪ್ರವಾಹದಿಂದಾಗಿ ದೇಶದಲ್ಲಿ ಆಹಾರ ಕೊರತೆಯಾಗುವ ಸಾಧ್ಯತೆಗಳು ಬಹಳ ಇವೇ ಎಂದು ಎಚ್ಚರಿಕೆ ನೀಡಿದ್ದಾರೆ. * ಉತ್ತರ ಕೊರಿಯಾಕ್ಕೆ ಕೆಲವು ದೇಶಗಳು ಅಣ್ವಸ್ತ್ರ ಹಾಗೂ ಕ್ಷಿಪಣಿ ಯೋಜನೆಗಳಿಂದ ನಿರ್ಬಂಧವನ್ನು ವಿಧಿಸಿವೆ ಇದರಿಂದಾಗಿ ಉತ್ತರ ಕೊರಿಯಾ ರಾಷ್ಟ್ರವು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ, ಹಾಗೂ ಕೃಷಿ ವಲಯ ಸಂಪೂರ್ಣ ವಿಫಲವಾಗಿ ನಿರೀಕ್ಷಿಣೆಯ ಆಹಾರ ಪಧಾರ್ಥಗಳ ಉತ್ಪಾದನೆಯಾಗಿಲ್ಲ ಎಂದಿದ್ದಾರೆ. * ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಿಂದಾಗಿ ದೇಶದ ಗಡಿಗಳನ್ನು ಮುಚ್ಚಲಾಗಿದೆ ಇದರಿಂದ ಉತ್ತರ ಕೊರಿಯಾ ರಾಷ್ಟ್ರದ ಆರ್ಥಿಕತೆಯು ಇನ್ನಷ್ಟು ಕ್ಷೀಣಿಸಿದೆ, ಇದರ ಜೊತೆಯಲ್ಲೇ ಚೀನಾ ರಾಷ್ಟ್ರದೊಂದಗಿರುವ ವ್ಯಾಪಾರವನ್ನು ಕೂಡ ಉತ್ತರ ಕೊರಿಯಾ ಸ್ಥಗಿತಗೊಳಿಸಿದೆ.