Job Description: * ಪ್ರತಿದಿನ ದೇಶದ ಪ್ರಮುಖ ನಗರದ ಗಾಳಿಯ ಗುಣಮಟ್ಟದ ಮಾನದಂಡ ಸೂಚ್ಯಂಕ ಪಟ್ಟಿಯನ್ನು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡುತ್ತದೆ. * ಇದೇ ಜೂನ್. 15 ರಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ 131 ನಗರಗಳ ಸೂಚ್ಯಂಕದ ಪಟ್ಟಿಯನ್ನು ಪ್ರಕಟಣೆ ಮಾಡಿದೆ, ಈ ಸೂಚ್ಯಂಕದ ಪಟ್ಟಿಯಲ್ಲಿ 41 ನಗರಗಳು ಉತ್ತಮ, ಮತ್ತು 65 ನಗರಗಳು ಸಮಾಧಾನಕರ ಇದರ ಜೊತೆಗೆ 21 ನಗರಗಳ ಗಾಳಿಯ ಸ್ಥಿತಿ ಮಧ್ಯಮ ಎಂದು ಪ್ರಕಟಣೆಯನ್ನು ಹೊರಡಿಸಿದೆ. * ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜೂನ್. 15 ರಂದು ಬಿಡುಗಡೆ ಮಾಡಿದ ವರದಿಯ ಪ್ರಕಾರ ಕರ್ನಾಟಕ ರಾಜ್ಯದ ಗದಗ ನಗರವು ದೇಶದಲ್ಲಿ ಶುದ್ಧ ಹಾಗೂ ಸ್ವಚ್ಛ ಗಾಳಿ ಬೀಸುವ ನಗರ ಪಟ್ಟಿಯಲ್ಲಿ ಮುಂಚೂಣಿ ಸ್ಥಾನವನ್ನು ಪಡೆದುಕೊಂಡಿದೆ. * ಪ್ರಸ್ತುತ ಸ್ವಚ್ಛ ಗಾಳಿ ಬೀಸುವ ನಗರ ಪಟ್ಟಿಯಲ್ಲಿ ಕರ್ನಾಟಕ ರಾಜ್ಯದ ಗದಗ ನಗರವು 10 ಸೂಚ್ಯಂಕ ಪಡೆದುಕೊಂಡು ಶುದ್ಧ ಗಾಳಿ ಬೀಸುವ ಅತ್ಯುತ್ತಮ ನಗರವಾಗಿದೆ, ಮತ್ತು ಮಿಜೋರಾಂ ರಾಜ್ಯದ ರಾಜಧಾನಿ ಐಜ್ವಾಲ್ 11 ಸೂಚ್ಯಂಕ ಪಡೆದುಕೊಂಡು 2 ನೇ ಸ್ಥಾನದಲ್ಲಿದೆ, ಕರ್ನಾಟಕದ ರಾಜ್ಯದ ಯಾದಗಿರಿ ನಗರವು 14 ಸೂಚ್ಯಂಕ ಪಡೆದುಕೊಂಡು 3 ನೇ ಸ್ಥಾನ ಪಡೆದಿದೆ, ನಂತರ ಹುಬ್ಬಳ್ಳಿ 21 ಸೂಚ್ಯಂಕ ಪಡೆದು 4 ನೇ ಸ್ಥಾನದಲ್ಲಿದೆ, ಬಾಗಲಕೋಟೆ ಜಿಲ್ಲೆಯು 25 ಸೂಚ್ಯಂಕ ಪಡೆದುಕೊಂಡು 6 ಸ್ಥಾನ, ಬೀದರ್ ಮತ್ತು ರಾಯಚೂರು 26 ಸೂಚ್ಯಂಕ ಪಡೆದು 7 ನೇ ಸ್ಥಾನ ಗಳಿಸಿವೆ. * ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿರುವ ವರದಿಯ ಪ್ರಕಾರ ಗಾಳಿ ಗುಣಮಟ್ಟದ ಸೂಚ್ಯಂಕದಲ್ಲಿ 0&50 ಬಂದರೆ ತುಂಬಾ ಕಡಿಮೆ ಕಲುಷಿತ ಗಾಳಿ ಎಂದು ಪರಿಗಣಿಸಲಾಗುವದು ಎಂದು ತಿಳಿಸಿದೆ. * ಪ್ರತಿ 24 ಗಂಟೆಗಳಿಗೊಮ್ಮೆ ಶುದ್ಧ ಗಾಳಿ ಮಾಪನ ಪ್ರಕ್ರಿಯೆ ನಡೆಯುತ್ತಿರುತ್ತದೆ ಎಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.