Job Description: * 2021 ರ ಜೂನ್. 16 ರಿಂದ 19 ರವರೆಗೆ ನಡೆಯಲಿರುವ ವಿವಾಟೆಕ್(VivaTech)ನ 5 ನೇ ಆವೃತ್ತಿಯಲ್ಲಿ ಮುಖ್ಯ ಭಾಷಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೌರವ ಅತಿಥಿಯಾಗಿ ಆಹ್ವಾನಿಸಿದ್ದಾರೆ. * ಈ ವಿವಾಟೆಕ್(VivaTech)ನ 5 ನೇ ಆವೃತ್ತಿಯಲ್ಲಿ ಬೇರೆ ಬೇರೆ ರಾಷ್ಟ್ರಗಳ ಪ್ರಮುಖ ಭಾಷಣಕಾರರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಸ್ಪೇನ್ನ ಪ್ರಧಾನ ಮಂತ್ರಿ ಪೆಡ್ರೊ ಸ್ಯಾಂಚೆಜ್ ಹಾಗೂ ವಿವಿಧ ಯುರೋಪಿಯನ್ ರಾಷ್ಟ್ರಗಳ ಮಂತ್ರಿಗಳು ಮತ್ತು ಸಂಸದರು ಇರಲಿದ್ದಾರೆ, ಇದಲ್ಲದೆ ಕಾರ್ಪೊರೇಟ್ ನಾಯಕರುಗಳಾಗಿರುವ ಆಪಲ್ ಸಂಸ್ಥೆಯ ಸಿಇಓ ಟಿಮ್ ಕುಕ್, ಮೈಕ್ರೋಸಾಫ್ಟ್ ಅಧ್ಯಕ್ಷ ಬ್ರಾಡ್ ಸ್ಮಿತ್, ಇವರ ಜೊತೆಗೆ ಫೇಸ್ಬುಕ್ ಅಧ್ಯಕ್ಷ ಮಾರ್ಕ್ ಜುಕರ್ಬರ್ಗ್ ಅವರು ಪಾಲ್ಗೊಳ್ಳಲಿದ್ದಾರೆ. * ಪ್ರಸ್ತುತ ವಿವಾಟೆಕ್'ನ್ನು 2016 ರಲ್ಲಿ ಆರಂಭಿಸಲಾಗಿದೆ, ಇದು ಯುರೋಪಿನ ಅತಿದೊಡ್ಡ ಡಿಜಿಟಲ್ ಮತ್ತು ಸ್ಟಾರ್ಟ್ ಅಪ್ ಘಟನೆಗಳಲ್ಲಿ ವಿವಾಟೆಕ್ ಕೂಡ ಒಂದಾಗಿದೆ ಹಾಗೂ ಇದು ಪ್ರತಿ ವರ್ಷವು ಪ್ಯಾರಿಸ್ನಲ್ಲಿ ನಡೆಸಲಾಗುತ್ತದೆ. * ಈ ವಿವಾಟೆಕ್ನ(VivaTech) 5 ನೇ ಆವೃತ್ತಿಯ ಈವೆಂಟ್'ನ್ನು ಪ್ರಮುಖ ಜಾಹೀರಾತು ಮತ್ತು ಮಾರ್ಕೆಟಿಂಗ್ ಸಂಘಟನೆಯಾಗಿರುವ ಫ್ರಾನ್ಸ್'ನ ಪ್ರಮುಖ ಮಾಧ್ಯಮ ಸಮೂಹ ಲೆಸ್ ಎಕೋಸ್ ಹಾಗೂ ಪಬ್ಲಿಕ್ ಗ್ರೂಪ್ ಜಂಟಿಯಾಗಿ ಆಯೋಜಿಸಿದೆ.