Job Description: * ಪ್ರತಿವರ್ಷವು ಜೂನ್. 15 ರಂದು ವಿಶ್ವ ಹಿರಿಯರ ನಿಂದನೆ ದಿನದ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ ಹಾಗೂ ಪ್ರಪಂಚದಾದ್ಯಂತ ಇರುವ ವಯಸ್ಸಾದ ಜನರು ಅನುಭವಿಸುವ ನಿಂದನೆಗಳ (ದೈಹಿಕ ಅಥವಾ ಭಾವನಾತ್ಮಕ) ವಿಷಯಗಳ ಬಗ್ಗೆ ಈ ದಿನದಂದು ಜಾಗೃತಿ ಮೂಡಿಸಲಾಗುತ್ತದೆ. * "ನ್ಯಾಯಕ್ಕೆ ಪ್ರವೇಶ" ಪ್ರಸ್ತುತ ವರ್ಷದ ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನದ ಧ್ಯೇಯವಾಕ್ಯವಾಗಿದೆ. * ಈ ಹಿಂದೆ 2006 ರಲ್ಲಿ ಜೂನ್. 15 ನ್ನು ಹಿರಿಯರಿಗೆ ವಿಶೇಷ ದಿನವೆಂದು ಘೋಷಣೆ ಮಾಡಿ ಆಚರಿಸಲು ಆರಂಭಿಸಲಾಯಿತು ಆದರೆ 2011 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ದಿನವನ್ನು ಅಧಿಕೃತವಾಗಿ ಗುರುತಿಸಿದೆ.