Job Description: * ಪ್ರಸ್ತುತ 2021 ರ ಜೂನ್.16 ರಂದು ಮಹಾರಾಷ್ಟ್ರ ರಾಜ್ಯದ ಜಲ್ಗಾಂವ್ ಜಿಲ್ಲೆಯ ಫೈಬರ್ ಹಾಗೂ ಖನಿಜ ಸಮೃದ್ಧವಾದ 'ಜಲ್ಗಾಂವ್ ಬಾಳೆಹಣ್ಣು'ನ್ನು ದುಬೈಗೆ ರಫ್ತು ಮಾಡಲಾಯಿತು, ಪ್ರಸ್ತುತ ಜಲ್ಗಾಂವ್ ಬಾಳೆಹಣ್ಣು ಮಹಾರಾಷ್ಟ್ರ ರಾಜ್ಯದ ಜಲ್ಗಾಂವ್ ಜಿಲ್ಲೆಯಿಂದ ಭೌಗೋಳಿಕ ಸೂಚನೆಗಳು (GI) ಪ್ರಮಾಣೀಕೃತ ಕೃಷಿ ಉತ್ಪನ್ನ ಇದಾಗಿದೆ. * ಮಹಾರಾಷ್ಟ್ರ ರಾಜ್ಯದ ಜಲ್ಗಾಂವ್ ಜಿಲ್ಲೆಯ ತಂದಲ್ವಾಡಿ ಗ್ರಾಮದ ರೈತರಿಂದ 22 ಮೆಟ್ರಿಕ್ ಟನ್ ಜಲ್ಗಾಂವ್ ಬಾಳೆಹಣ್ಣನ್ನು ಪಡೆದುಕೊಂಡು ಅವುಗಳನ್ನು ದುಬೈಗೆ ರಫ್ತು ಮಾಡಲಾಗಿದೆ. * ಪ್ರಸ್ತುತ ಮಹಾರಾಷ್ಟ್ರ ರಾಜ್ಯದ ಜಲ್ಗಾಂವ್ ಜಿಲ್ಲೆಯನ್ನು 'ಬಾಳೆ ನಗರ' ಎಂದು ಕರೆಯುತ್ತಾರೆ ಹಾಗೂ ಈ ಬಾಳೆಹಣ್ಣು ಕೃಷಿ ರಫ್ತು ನೀತಿಯ ಅಡಿಯಲ್ಲಿ ಗುರುತಿಸಿಕೊಂಡ ಕ್ಲಸ್ಟರ್ ಬಾಳೆಹಣ್ಣು ಆಗಿದೆ. * ಈ ಹಿಂದೆ 2016 ರಲ್ಲಿ ಜಲ್ಗಾಂವ್ ಜಿಲ್ಲೆಯ ಬಾಳೆಹಣ್ಣಿಗೆ GI ಪ್ರಮಾಣೀಕರಣವು ದೊರಕಿದೆ. ಹಾಗೂ ಈ ಬಾಳೆಹಣ್ಣುನ್ನು ಜಲ್ಗಾಂವ್'ನ ನಿಸರ್ಗ್ರಾಜಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೋಂದಾಯಿಸಲಾಗಿದೆ. * 2020-21 ರ ಅವಧಿಯಲ್ಲಿ ಭಾರತದಲ್ಲಿ ಬೆಳೆದಿರುವ 1.91 ಲಕ್ಷ ಟನ್ ಮೌಲ್ಯದ ಬಾಳೆಹಣ್ಣನ್ನು ರಫ್ತು ಮಾಡಲಾಗಿದೆ ಈ ಬಾಳೆಹಣ್ಣಿನ ಮೌಲ್ಯವು 619 ಕೋಟಿ ರೂ. ಆಗಿದೆ. * ಭಾರತದಲ್ಲಿ ಶೇ. 70 ರಷ್ಟು ಬಾಳೆಹಣ್ಣು ಉತ್ಪಾದನೆ ಮಾಡುವ ಮುಖ್ಯ ರಾಜ್ಯಗಳು ಗುಜರಾತ್, ಆಂಧ್ರಪ್ರದೇಶ, ಕೇರಳ, ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಬಿಹಾರ ಮತ್ತು ಮಧ್ಯಪ್ರದೇಶ.