Job Description: * ಪ್ರಸ್ತುತ 2021 ರ ಜೂನ್. 15 ರಂದು ಯುನೈಟೆಡ್ ಕಿಂಗ್ಡಮ್ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ, ಈ ಮುಕ್ತ ವ್ಯಾಪಾರ ಒಪ್ಪಂದವು ಸರಕುಗಳ ಮೇಲಿನ ಸುಂಕವನ್ನು ತೆಗೆದುಹಾಕುವ ಒಪ್ಪಂದವಾಗಿದೆ, ಪ್ರಸ್ತುತ ಈ ಒಪ್ಪಂದಕ್ಕೆ ಯುರೋಪಿಯನ್ ಒಕ್ಕೂಟದಿಂದ ಯುಕೆ ನಿರ್ಗಮಿಸಿದ ನಂತರ ಸಹಿ ಹಾಕಲಾಗಿದೆ. ಇದೀಗ ಯು.ಕೆ ಪ್ರಪಂಚದ ಎಲ್ಲ ಕಡೆಗಳಲ್ಲಿ ಉತ್ತಮ ಲಿಂಕ್ಗಳನ್ನು ವಿಸ್ತರಿಸಲು ಹುಡುಕುತ್ತಿದೆ. * ಈ ಒಪ್ಪಂದದಿಂದ ಬ್ರಿಟಿಷ್ ಉತ್ಪನ್ನಗಳಾಗಿರುವ ಸ್ಕಾಚ್ ವಿಸ್ಕಿಯಂತಹ ವಸ್ತುಗಳ ರಫ್ತುನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. * ಯುಕೆ ರಾಷ್ಟ್ರವು ಆಸ್ಟ್ರೇಲಿಯಾ, ಚಿಲಿ, ಜಪಾನ್, ಕೆನಡಾ, ಮೆಕ್ಸಿಕೊ, ಸಿಂಗಾಪುರ್ ಹಾಗೂ ವಿಯೆಟ್ನಾಂನ 11 CPTPP ಸದಸ್ಯರ 7 ಜನರೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಹೊಂದಿದೆ. * ಪ್ರಸ್ತುತ ಯುಕೆ ಆಸ್ಟ್ರೇಲಿಯಾದ 5 ನೇ ಅತಿದೊಡ್ಡ ವ್ಯಾಪಾರ ಪಾಲುದಾರ, 2020 ರಲ್ಲಿ ಆಸ್ಟ್ರೇಲಿಯಾದೊಂದಿಗಿನ ಯುಕೆ ವ್ಯಾಪಾರವು ಅದರ ಒಟ್ಟು ವ್ಯಾಪಾರದ 1.2% ಆಗಿದೆ. * ಟ್ರಾನ್ಸ್-ಪೆಸಿಫಿಕ್ ಸಹಭಾಗಿತ್ವಕ್ಕಾಗಿ ಸಮಗ್ರ ಮತ್ತು ಪ್ರಗತಿಶೀಲ ಒಪ್ಪಂದ (CPTPP) ಅಥವಾ TPP-11 ಎಂದೂ ಕರೆಯಲಾಗುತ್ತದೆ, ಆಸ್ಟ್ರೇಲಿಯಾ, ಬ್ರೂನಿ, ಚಿಲಿ, ಮಲೇಷ್ಯಾ, ಕೆನಡಾ, ಜಪಾನ್, ಮೆಕ್ಸಿಕೊ, ನ್ಯೂಜಿಲೆಂಡ್, ಸಿಂಗಾಪುರ್, ಪೆರು ಮತ್ತು ವಿಯೆಟ್ನಾಂ ರಾಷ್ಟ್ರಗಳ ನಡುವೆ ವ್ಯಾಪಾರ ಒಪ್ಪಂದವಾಗಿದೆ.