Job Description: * ರಂಗಭೂಮಿ ಕಲಾವಿದೆಯಾಗಿರುವ ಅಕ್ಷತಾ ಪಾಂಡವಪುರ ಅವರು ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ, ಪ್ರಸ್ತುತ ಅಕ್ಷತಾ ಪಾಂಡವಪುರ ನಟನೆಯ "ವೇರ್ ಈಸ್ ಪಿಂಕಿ" ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. * 2021 ರ ನ್ಯೂಯಾರ್ಕ್'ನ ಇಂಡಿಯನ್ ಫಿಲಂ ಫೆಸ್ಟಿವಲ್'ನಲ್ಲಿ ಅಕ್ಷತಾ ಪಾಂಡವಪುರ ನಟನೆಯ "ವೇರ್ ಈಸ್ ಪಿಂಕಿ" (ಪಿಂಕಿ ಎಲ್ಲಿ) ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ಹಾಗೂ ಅತ್ಯುತ್ತಮ ನಟಿ ವಿಭಾಗದಲ್ಲಿ 2 ಪ್ರಶಸ್ತಿಗಳು ಲಭಿಸಿವೆ. * 2021ರ ನ್ಯೂಯಾರ್ಕ್'ನ ಇಂಡಿಯನ್ ಫಿಲಂ ಫೆಸ್ಟಿವಲ್'ಗಿಂತ ಮೊದಲು "ಪಿಂಕಿ ಎಲ್ಲಿ" ಚಿತ್ರವು ಭಾರತದ ಕೋಲ್ಕತಾ, ಮುಂಬೈ, ಕೇರಳ, ಜೈಪುರ್, ಪನೋರಮ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ಗೆ ಆಯ್ಕೆಯಾಗಿ ಹೆಸರು ಗಳಿಸಿತ್ತು.