Job Description: * ವಿಶ್ವ ರಕ್ತದಾನಿಗಳ ದಿನವನ್ನು ಪ್ರತಿವರ್ಷ 2021ರ ಜೂನ್.14 ರಂದು ಆಚರಣೆ ಮಾಡಲಾಗುತ್ತದೆ. * ವಿಶ್ವ ಆರೋಗ್ಯ ಸಂಸ್ಥೆ (WHO)ಯು ರಕ್ತದಾನಿಗಳ ದಿನವನ್ನು ಮೊದಲ ಬಾರಿಗೆ 2004 ರ ಜೂನ್.14 ರಂದು ಆರಂಭಿಸಿತ್ತು. * ಪ್ರಸ್ತುತ ಕಾರ್ಲ್ ಲ್ಯಾಂಡ್ಸ್ಟೈನರ್ ಅವರ ಜನ್ಮದಿನವಾಗಿರುವ ಜೂನ್. 14 ನ್ನು ವಿಶ್ವ ರಕ್ತದಾನಿಗಳ ದಿನವಾಗಿ ಆಚರಿಸಲಾಗುತ್ತದೆ. * ಅಂತರರಾಷ್ಟ್ರೀಯ ರೆಡ್ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳ ಒಕ್ಕೂಟವು ಈಗೀನ ಸಾರ್ವಜನಿಕರಲ್ಲಿ ಆರೋಗ್ಯವಂತ ವ್ಯಕ್ತಿಗಳು ಸ್ವಯಂಪ್ರೇರಣೆಯಿಂದ ಮತ್ತು ಹಣರಹಿತ ಸುರಕ್ಷಿತ ರಕ್ತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿವೆ. * ವಿಶ್ವ ಆರೋಗ್ಯ ಸಂಸ್ಥೆ (WHO)ಯು ತನ್ನ 192 ಸದಸ್ಯ ರಾಷ್ಟ್ರಗಳೊಂದಿಗೆ 58ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ರಕ್ತದಾನಿಗಳ ದಿನವನ್ನು 2005ರ ಮೇ.ನಲ್ಲಿ ಸ್ಥಾಪನೆ ಮಾಡಲಾಯಿತು. * 2021ರ ವಿಶ್ವ ರಕ್ತದಾನಿಗಳ ದಿನದ ಧ್ಯೇಯವಾಕ್ಯ : ಪ್ರಸ್ತುತ ಸಮುದಾಯ ಒಗ್ಗಟ್ಟು ಹಾಗೂ ಸಾಮಾಜಿಕ ಒಗ್ಗಟ್ಟು ವೃದ್ಧಿಸುವಲ್ಲಿ ಸಮುದಾಯ ಮೌಲ್ಯಗಳನ್ನು ಉತ್ತೇಜಿಸಲು ರಕ್ತದಾನ ಸಹಾಯ ಮಾಡುತ್ತದೆ.