Job Description: * ಇದೇ 2021 ರ ಜೂನ್. 11ರಂದು 7 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ 'ನಮಸ್ತೆ ಯೋಗ' ಎಂಬ ಮೊಬೈಲ್ ಅಪ್ಲಿಕೇಶನ್'ನ್ನು ಆಯುಷ್ ಸಚಿವಾಲಯವು ಆರಂಭಿಸಿದೆ, ಹಾಗೂ ಈ ಅಪ್ಲಿಕೇಶನ್ ಯೋಗಕ್ಕೆ ಮಾತ್ರ ಸೀಮಿತವಾಗಿರಲಿದೆ ಎಂದು ತಿಳಿಸಿದೆ. * ಆಯುಷ್ ಸಚಿವಾಲಯವು, ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯೋಗ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ, ಇದೇ ಸಮಯದಲ್ಲಿ ಆಯುಷ್ ಸಚಿವರಾಗಿರುವ ಶ್ರೀ ಕಿರೆನ್ ರಿಜಿಜು ಅವರು ಅಂತರರಾಷ್ಟ್ರೀಯ ಯೋಗ ದಿನ (IDY) 2021 ರಂದು ದೂರದರ್ಶನದಲ್ಲಿ ಸುಮಾರು 10 ದಿನಗಳ ಯೋಗದ ಈ ಸರಣಿಯನ್ನು ಕೇಂದ್ರ ಸಂದೇಶ ಮೂಲಕ ತಿಳಿಸುತ್ತದೆ, “ಬಿ ವಿಥ್ ಯೋಗ, ಬಿ ಅಟ್ ಹೋಂ” ಎಂದು ಹೇಳಿದರು. * ಸಾರ್ವಜನಿಕರಿಗೆ ಮಾಹಿತಿ ವೇದಿಕೆಯಾಗಿ ಈ ನಮಸ್ತೆ ಯೋಗ ಅಪ್ಲಿಕೇಶನ್'ನ್ನು ಅಭಿವೃದ್ಧಿ ಪಡಿಸಲಾಗಿದೆ, ಇದರಿಂದ ಯೋಗದ ಜಾಗೃತಿ ಹಾಗೂ ದೊಡ್ಡ ಸಮುದಾಯಕ್ಕೆ ಯೋಗವನ್ನು ಪ್ರವೇಶಿಸುವ ಉದ್ದೇಶದಿಂದ ನಮಸ್ತೆ ಯೋಗ ಅಪ್ಲಿಕೇಶನ್ ಆರಂಭಿಸಲಾಗಿದೆ. * ಪ್ರತಿ ವರ್ಷ ಜೂನ್. 21 ರಂದು ಅಂತರರಾಷ್ಟ್ರೀಯ ಯೋಗ ದಿನ (IDY) ಆಚರಣೆ ಮಾಡಲಾಗುತ್ತದೆ, ಈ ಹಿಂದೆ 2020 ನೇ ವರ್ಷದ ಧ್ಯೇಯವ್ಯಾಕ್ಯ ‘ಆರೋಗ್ಯಕ್ಕಾಗಿ ಯೋಗ - ಮನೆಯಲ್ಲಿ ಯೋಗ’ ವಿಷಯದ ಅಡಿಯಲ್ಲಿ ಆಚರಿಸಲಾಗಿತ್ತು, ಪ್ರಸ್ತುತ 2021 ನೇ ವರ್ಷದ ಧ್ಯೇಯವ್ಯಾಕ್ಯ 'ಮನೆಯಲ್ಲಿ ಯೋಗ ಮತ್ತು ಕುಟುಂಬದೊಂದಿಗೆ ಯೋಗ' ಎಂಬ ವಿಷಯದ ಅಡಿಯಲ್ಲಿ ಆಚರಿಸಲಾಗುವುದು. * 2014 ರ ಡಿಸೆಂಬರ್'ನಲ್ಲಿ ವಿಶ್ವಸಂಸ್ಥೆಯು ನಿರ್ಣಯವನ್ನು ಅಂಗೀಕರಿಸಲಾಯಿತು, ಜೂನ್.21 ರಂದು ಅಂತರರಾಷ್ಟ್ರೀಯ ಯೋಗ ದಿನ ಎಂದು ಘೊಷಣೆ ಮಾಡಿತು, 2015 ರಲ್ಲಿ ಪ್ರಥಮ ಯೋಗ ದಿನವನ್ನು ನವದೆಹಲಿಯ ರಾಜ್ಪಾತ್'ನಲ್ಲಿ ಆಚರಣೆ ಮಾಡಲಾಯಿತು.