Job Description: * ಪ್ರಸ್ತುತ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮಾವೇಶದ (UNCTAD) ಮುಖ್ಯಸ್ಥರಾಗಿ ಅರ್ಥಶಾಸ್ತ್ರಜ್ಞ ರೆಬೆಕ್ಕಾ ಗ್ರಿನ್ಸ್ಪಾನ್ ಅವರನ್ನು ನಾಮನಿರ್ದೇಶನ ಮಾಡಲು ಅನುಮೋದನೆ ನೀಡಿದೆ. * ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮಾವೇಶದ ಪ್ರಧಾನ ಕಾರ್ಯದರ್ಶಿಯಾಗಿ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ನಾಮನಿರ್ದೇಶನಗೊಂಡಿದ್ದಾರೆ. * ರೆಬೆಕ್ಕಾ ಗ್ರಿನ್ಸ್ಪಾನ್ ಅವರು ಜಿನೀವಾ ಮೂಲದ UNCTAD ಸಂಘಟನೆಯನ್ನು ಮುನ್ನಡೆಸಿದ್ದಾರೆ, ಈ ಮೊದಲು 2014 ರಿಂದ ರೆಬೆಕಾ ಗ್ರಿನ್ಸ್ಪಾನ್ ಅವರು ಐಬೆರೋ-ಅಮೇರಿಕನ್ ಜನರಲ್ ಸೆಕ್ರೆಟರಿಯಟ್ನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. * ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಂನ ಉಪ ನಿರ್ವಾಹಕರಾಗಿ 2010 ರಿಂದ 2014 ರವರೆಗೆಯೂ ಕೆಲಸ ಮಾಡಿದ್ದಾರೆ, ಇದರ ಜೊತೆಯಲ್ಲಿ ಲ್ಯಾಟಿನ್ ಅಮೆರಿಕ ಹಾಗೂ ಕೆರಿಬಿಯನ್ ದೇಶಗಳ ಯುಎನ್ಡಿಪಿಯ ಪ್ರಾದೇಶಿಕ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. * 1964 ರಲ್ಲಿ ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಕುರಿತ ವಿಶ್ವಸಂಸ್ಥೆಯ ಸಮ್ಮೇಳವನ್ನು ಶಾಶ್ವತ ಅಂತರ್ ಸರ್ಕಾರಿ ಸಂಸ್ಥೆಯಾಗಿ ಸ್ಥಾಪನೆ ಮಾಡಲಾಗಿದೆ, ಹಾಗೂ ಇದು ವಿಶ್ವಸಂಸ್ಥೆಯ ಸಚಿವಾಲಯದ ಒಂದು ಭಾಗವಾಗಿ ವ್ಯಾಪಾರ ಮತ್ತು ಅಭಿವೃದ್ಧಿ ವಿಷಯಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.