Job Description: * ಪ್ರಸ್ತುತ ಶಿಕ್ಷಣ ಸಚಿವಾಲಯವು ಶಾಲೆಯಿಂದ ಹೊರಗಿರುವ ಮಕ್ಕಳ ಡೇಟಾವನ್ನು ಸಂಗ್ರಹಿಸಲು ಆನ್ಲೈನ್ ಮಾಡ್ಯೂಲ್'ನ್ನು ಅಭಿವೃದ್ಧಿಪಡಿಸಿದೆ, ಇದರಿಂದ ತ್ರೈಮಾಸಿಕ ಪ್ರಗತಿ ವರದಿಯನ್ನು ಅಪ್ಲೋಡ್ ಮಾಡಲು ಶಿಕ್ಷಣ ಸಚಿವಾಲಯ ರಾಜ್ಯ ಮತ್ತು ಕೇಂದ್ರ ಪ್ರದೇಶಗಳಿಗೆ ಕೇಳಿದೆ. * ಈ ಆನ್ಲೈನ್ ಮಾಡ್ಯೂಲ್ ಶಾಲೆಯಿಂದ ಹೊರಗಿರುವ ಮಕ್ಕಳನ್ನು ಶಾಲಾ ತರಗತಿಗೆ ಮರಳಿ ತರಲು ಸಹಾಯ ಮಾಡುತ್ತದೆ, ಈ ಮಾಡ್ಯೂಲ್ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಕೇಂದ್ರಕ್ಕೆ ಅನುಗುಣವಾಗಿದೆ. * ಪ್ರಸ್ತುತ ಶಾಲೆಗಳಿಂದ ಹೊರಗುಳಿದಿರುವ ಮಕ್ಕಳು ಮತ್ತು ಎಸ್ಟಿಸಿಗಳ ಮಾಹಿತಿಯನ್ನು ಬ್ಲಾಕ್ ಸಂಪನ್ಮೂಲ ಸಂಯೋಜಕರ ಅಡಿಯಲ್ಲಿ ಬ್ಲಾಕ್ ಮಟ್ಟದಲ್ಲಿ ಅಪ್ಲೋಡ್ ಮಾಡಲಾಗುತ್ತದೆ ಎಂದು ತಿಳಿಸಿದೆ. * ಪ್ರಸ್ತುತ ಈ ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ಲಕ್ಷಾಂತರ ವಿದ್ಯಾರ್ಥಿಗಳು ಶಾಲೆಗಳಿಂದ ಹೊರಗುಳಿದಿದ್ದಾರೆ ಎಂದು ತಜ್ಞರು ಮತ್ತು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದರಿಂದ ಈ ಮಾಡ್ಯೂಲ್'ನ್ನು ಅಭಿವೃದ್ಧಿಪಡಿಸಿದೆ. * ಈ ಆನ್ಲೈನ್ ಮಾಡ್ಯೂಲ್ ಶಾಲಾ ಶಿಕ್ಷಣಕ್ಕಾಗಿ ಅಭಿವೃದಿಪಡಿಸಿದ ಸಂಯೋಜಿತ ಯೋಜನೆ ಇದಾಗಿದೆ, ಇದು ಶಾಲೆಯಲ್ಲಿ ಎಲ್ಲಾ ಹಂತದಲ್ಲೂ ಸಮಾನ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಗೊಳಿಸುತ್ತದೆ, ಮತ್ತು ಸರ್ವ ಶಿಕ್ಷಣ ಅಭಿಯಾನ್, ಶಿಕ್ಷಕರ ಶಿಕ್ಷಣ ಮತ್ತು ರಾಷ್ಟ್ರೀಯ ಮಧ್ಯಮಕ್ಷ ಶಿಕ್ಷಣ ಅಭಿಯಾನಗಳನ್ನು ಸಬ್ಮ್ಯೂಸ್ ಮಾಡುವ ಮೂಲಕ ಈ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.