Job Description: * ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವು 3 ವಿಧದ ರೀತಿಯ ವೆಚ್ಚ-ಪರಿಣಾಮಕಾರಿ (Cost-Effective) ವೆಂಟಿಲೇಟರ್ ಮತ್ತು ಆಮ್ಲಜನಕ ಸಾಂದ್ರತೆಯನ್ನು ಅಭಿವೃದ್ಧಿಪಡಿಸಿದೆ. * ಇಸ್ರೋ ಅಭಿವೃದ್ಧಿಪಡಿಸಿದ ಈ 3 ವೆಂಟಿಲೇಟರ್ಗಳನ್ನು ಪ್ರಾಣ, ವಾಯು ಮತ್ತು ಸ್ವಸ್ತಾ ಎಂದು ಹೆಸರಿಸಿದೆ ಮತ್ತು ಆಮ್ಲಜನಕದ ಸಿಲಿಂಡರ್'ನ್ನು ಶ್ವಾಸ್ ಎಂದು ಹೆಸರಿಸಿದೆ. * ಪ್ರಾಣ ಎಂಬ ವೆಂಟಿಲೇಟರ್ ಅಂಬು ಚೀಲದ ಸ್ವಯಂಚಾಲಿತವಾಗಿ ರೋಗಿಗೆ ಬೇಕಾಗಿರುವ ಉಸಿರಾಟದ ಅನಿಲವನ್ನು ನೀಡುತ್ತದೆ. * ಸ್ವಾಸ್ತಾ ಎಂಬ ವೆಂಟಿಲೇಟರ್ ವಿದ್ಯುತ್ ಶಕ್ತಿ ಇಲ್ಲದೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. * ಶ್ವಾಸ್ ಎಂಬ ಆಮ್ಲಜನಕ ಸಿಲಿಂಡರ್ ನಿಮಿಷಕ್ಕೆ 10 ಲೀಟರ್'ನಷ್ಟು ಆಮ್ಲಜನಕವನ್ನು ಪೂರೈಸುವ ಸಾಮರ್ಥ್ಯವನ್ನು ಇದು ಹೊಂದಿದೆ ಹಾಗೂ ಇದು ಒಂದೇ ಸಮಯದಲ್ಲಿ ಇಬ್ಬರು ರೋಗಿಗಳಿಗೆ ಆಮ್ಲಜನಕ ನೀಡುತ್ತದೆ. * ಪ್ರಸ್ತುತ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವು ಕೇರಳ ಜಿಲ್ಲೆಯ ತಿರುವನಂತಪುರದಲ್ಲಿದೆ, ಭಾರತದ ಉಪಗ್ರಹ ರಾಕೆಟ್ ಹಾಗೂ ಬಾಹ್ಯಾಕಾಶ ವಾಹನಗಳ ಮೇಲೆ ನಿಯಂತ್ರಿಸುವ ಮುಖ್ಯವಾದ ಬಾಹ್ಯಾಕಾಶ ಸಂಶೋಧನಾ ಕೇಂದ್ರವಾಗಿದೆ, ಹಾಗೂ ಇದಕ್ಕೆ ಡಾ. ವಿಕ್ರಮ್ ಸಾರಾಭಾಯ್ ಅವರ ಹೆಸರು ನಾಮಕರಣ ಮಾಡಲಾಗಿದೆ.