Job Description: * ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಜ್ಯದಲ್ಲಿ “ಗಾರ್ಡಿಯನ್ ಮಂತ್ರಿಗಳನ್ನು” ನೇಮಿಸಿದರು, ಪ್ರಸ್ತುತ ಈ ಗಾರ್ಡಿಯನ್ ಮಂತ್ರಿಗಳು ಅಸ್ಸಾಂ ರಾಜ್ಯದ 34 ಜಿಲ್ಲೆಗಳಲ್ಲಿ ಸಮತೋಲಿತ ಹಾಗೂ ತ್ವರಿತ ಮತ್ತು ಸುಸ್ಥಿರ ಬೆಳವಣಿಗೆಗಳನ್ನು ನೋಡಿಕೊಳ್ಳುವ ಹೊಣೆಯನ್ನು ಹೊಂದಿರುತ್ತಾರೆ, ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ ಆ ಸಮಸ್ಯೆಗಳನ್ನೂ ಕಾರ್ಯಗತಗೊಳಿಸುವದು ಹಾಗೂ ಅವುಗಳನ್ನೂ ಪರಿಹರಿಸುವ ಜವಾಬ್ದಾರಿಯನ್ನು ಇವರು ಹೊಂದಿರುತ್ತಾರೆ ಇದರೊಂದಿಗೆ ಅಸ್ಸಾಂ ರಾಜ್ಯ ಸರ್ಕಾರದ ನೀತಿ, ನಿಯಮ ಮತ್ತು ನಿರ್ಧಾರಗಳು, ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕರಿಗಾಗಿ ಕಲ್ಯಾಣ ಯೋಜನೆಗಳನ್ನು ಸಹ ನೋಡಿಕೊಳ್ಳುವ ಜವಾಬ್ದಾರಿಯನ್ನು ಇವರಿಗೆ ನೀಡಲಾಗಿರುತ್ತದೆ. * ಅಸ್ಸಾಂ ರಾಜ್ಯದ ನಿಯೋಜಿತ ಜಿಲ್ಲೆಗಳಿಗೆ ಈ ಗಾರ್ಡಿಯನ್ ಮಂತ್ರಿಗಳು ತುರ್ತು ಸಂದರ್ಭಗಳಲ್ಲಿ ಭೇಟಿ ನೀಡುತ್ತಾರೆ, ಮತ್ತು ಜಿಲ್ಲೆಯ ಕಲ್ಯಾಣ ಮತ್ತು ಅಭಿವೃದ್ಧಿಗೆ ಬೇಕಾಗಿರುವಂತಹ ನೀತಿ ನಿರ್ಧಾರಗಳನ್ನು ಸರ್ಕಾರಕ್ಕೆ ಸೂಚಿಸಲು ಅವಕಾಶವನ್ನು ನೀಡಲಾಗಿರುತ್ತದೆ ಎಂದು ತಿಳಿಸಿದ್ದಾರೆ. * ಅಸ್ಸಾಂ ರಾಜ್ಯದ ಈ ಗಾರ್ಡಿಯನ್ ಮಂತ್ರಿಗಳು ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವ ಯೋಜನೆಯನ್ನು ಕೂಡ ನೋಡಿಕೊಳ್ಳಲಿದ್ದಾರೆ. * ಪ್ರಸ್ತುತ ಅಸ್ಸಾಂ ರಾಜ್ಯದ 13 ಸಚಿವರಲ್ಲಿ 8 ಮಂತ್ರಿಗಳಿಗೆ ತಲಾ ಮೂರು ಜಿಲ್ಲೆಗಳನ್ನು ನೀಡಲಾಗಿದೆ ಮತ್ತು ಇನ್ನುಳಿದ 5 ಮಂತ್ರಿಗಳಿಗೆ ತಲಾ ಎರಡು ಜಿಲ್ಲೆಗಳನ್ನು ನೀಡಲಾಗಿದೆ ಎಂದು ಸರ್ಕಾರವು ತಿಳಿಸಿದೆ.