Job Description: * ಕೇರಳ ರಾಜ್ಯದ LDF ಪಕ್ಷವು ತನ್ನ ಬದ್ಧತೆಗಳನ್ನು ಪೂರೈಸಲು ಇದೀಗ ರಾಜ್ಯದಲ್ಲಿ ಸ್ಮಾರ್ಟ್ ಕಿಚನ್ ಯೋಜನೆಯನ್ನು ಅನುಷ್ಠಾನಗೊಳಿಸುವದಾಗಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಘೋಷಣೆ ಮಾಡಿದ್ದಾರೆ. * ಕೇರಳ ರಾಜ್ಯದಲ್ಲಿ 2021ರ ಜುಲೈ.10ರಂದು ಸ್ಮಾರ್ಟ್ ಕಿಚನ್ ಯೋಜನೆಯನ್ನು ಆರಂಭಿಸಲಾಗುವದು ಎಂದು ತಿಳಿಸಿದ್ದಾರೆ, ಮತ್ತು ಈ ಯೋಜನೆ ಅಡಿಯಲ್ಲಿ ರಾಜ್ಯದ ಮಹಿಳೆಯರಿಗೆ ತಮ್ಮ ತಮ್ಮ ಅಡುಗೆಮನೆ ನವೀಕರಿಣ ಮಾಡಿಕೊಳ್ಳಲು ಸಾಲ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ, ಇದರಿಂದಾಗಿ ಮಹಿಳೆಯರ ಮತ್ತು ಗೃಹ ಕಾರ್ಮಿಕರ ಕೆಲಸದ ಹೊರೆ ಕಡಿಮೆ ಮಾಡುವ ಸಲುವಾಗಿ ಈ ಯೋಜನೆಯನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.