Job Description: * ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ(NHAI) ವತಿಯಿಂದ ಟೋಲ್ ಪ್ಲಾಜಾಗಳಲ್ಲಿ 100 ಮೀ.ಗಿಂತಲೂ ದೂರದವರೆಗೆ ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದರೆ, ಆ ಸಂಧರ್ಭದಲ್ಲಿ ಮುಂಭಾಗದಲ್ಲಿ ಇರುವಂತಹ ವಾಹನಗಳಿಗೆ ಟೋಲ್ನಿಂದ ವಿನಾಯಿತಿ ನೀಡಲಾಗುತ್ತದೆ ಇದರಿಂದಾಗಿ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI)ವು ಇತರಹದ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ, ಅತೀ ಶೀಘ್ರದಲ್ಲಿ ದೇಶದ ಎಲ್ಲ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಈ ನಿಯಮ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. * ಪ್ರತಿಯೊಂದು ಟೋಲ್ ಪ್ಲಾಜಾಗಳಲ್ಲಿನ ಟೋಲ್ ಬೂತ್'ನಿಂದ 100 ಮೀ. ದೂರದಲ್ಲಿ ಹಳದಿ ಬಣ್ಣದ ಗೆರೆಯನ್ನು ಎಳೆಯಲಾಗಿರುತ್ತದೆ ಈ ಗೆರೆಗಿಂತಲೂ ಆಚೆ ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದರೆ ಆ ಸಮಯದಲ್ಲಿ ಹಳದಿ ಬಣ್ಣದ ಗೆರೆಯ ಒಳಗೆಡೆ ಇರುವ ವಾಹನಗಳು ಟೋಲ್ ಪಾವತಿಸದೇ ಮುಂದೆ ಸಾಗಬಹುದು ಎಂದು NHAI ತಿಳಿಸಿದೆ, ಮತ್ತು ಹಳದಿ ಗೆರೆ ಹೊರಗಡೆ ನಿಂತಿರುವ ವಾಹನಗಳು ಟೋಲ್ ಪಾವತಿಸಬೇಕು ಎಂದು NHAI ಈ ಹೊಸ ನಿಯಮ ತಿಳಿಸಿದೆ. * ಈ ಯೋಜನೆಯಿಂದಾಗಿ ಟೋಲ್ನಲ್ಲಿ ವ್ಯರ್ತವಾಗುವ ಸಮಯವನ್ನು ತಪ್ಪಿಸಲು ಮತ್ತು ಸಂಚಾರ ದಟ್ಟಣೆಗೆ ಬ್ರೇಕ್ ಹಾಕಲು ಈ ಯೋಜನೆ ಸಹಾಯಕಾರಿ ಯಾಗಲಿದೆ ಎಂದು ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ತಿಳಿಸಿದೆ.