Job Description: * ಕಮ್ಯುನಿಸ್ಟ್ ಮುಖಂಡ ಹಾಗೂ ಮಾಜಿ ಸಚಿವರು ಕೆ. ಆರ್. ಗೌರಿ ಅಮ್ಮ ಅವರು ಇತ್ತೀಚಿಗೆ ವಿಧಿವಶರಾದರು. * ಕೆ. ಆರ್. ಗೌರಿ ಅವರು 1919ರ ಜುಲೈ. 14 ರಂದು ಆಲಪ್ಪುಳ ಜಿಲ್ಲೆಯಲ್ಲಿ ಜನಿಸಿದರು, ನಂತರದ ದಿನಗಳಲ್ಲಿ ಇವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸದಸ್ಯರಾಗಿ ಸೇರಿಕೊಂಡರು ಮತ್ತು ಕಾರ್ಮಿಕರ ಹಕ್ಕುಗಳ ಹೋರಾಟದಲ್ಲಿ ಇವರದು ಹೆಚ್ಚಿನ ಪಾತ್ರವಾಗಿತ್ತು. * ಕೆ. ಆರ್. ಗೌರಿ ಅವರು 1948 ರಲ್ಲಿ ತುರಾವೂರ್ ಕ್ಷೇತ್ರದಿಂದ ತಿರು-ಕೊಚ್ಚಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದರು, ಆದರೆ ಇವರು ಚುನಾವಣೆಯಲ್ಲಿ ಸೋಲು ಅನುಭವಿಸಿದರು ನಂತರ ಇವರು ಮತ್ತೆ 1952 ಮತ್ತು 1954ರಲ್ಲಿ ನಡೆದ ಚುನಾವಣೆಯಲ್ಲಿ ಜಯ ಸಾಧಿಸಿದರು. * ಕೆ. ಆರ್. ಗೌರಿ ಅಮ್ಮ ಅವರು ಕೇರಳ ವಿಧಾನಸಭೆಗೆ ಮೊದಲ ಚುನಾವಣೆ ನಡೆದಾಗ ಅಂದರೆ 1957ರಲ್ಲಿ ಸ್ಪರ್ಧಿಸಿ ಗೆದ್ದು ರಾಜ್ಯದ ಮೊದಲ ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. * ಒಟ್ಟಾರೆ ಕೆ. ಆರ್. ಗೌರಿ ಅವರು 17 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು ಅವುಗಳಲ್ಲಿ 13 ಬಾರಿ ಗೆದಿದ್ದಾರೆ.