Job Description: * ಇತ್ತೀಚೆಗೆ ಗೋವಾ ಆರೋಗ್ಯ ಸಚಿವರು 18ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ 'ಐವರ್ಮೆಕ್ಟಿನ್' ಬಳಕೆ ಮಾಡುವಂತೆ ಶಿಫಾರಸ್ತು ಮಾಡಲಾಗಿತ್ತು, ಇದೀಗ ಐವರ್ಮೆಕ್ಟಿನ್ (ivermectin) ಬಳಕೆಯ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯನ್ನು ನೀಡಿದೆ. * ಇತ್ತೀಚಿಗೆ ಗೋವಾ ಸರ್ಕಾರವು ಕೋವಿಡ್-19 ಚಿಕಿತ್ಸಗೆ ಪ್ರೋಟೋಕಾಲ್'ನ್ನು ತೆರವುಗೊಳಿಸಿದೆ, ಇದರ ಅಡಿಯಲ್ಲಿ ಗೋವಾ ಸರ್ಕಾರವು ಐವರ್ಮೆಕ್ಟಿನ್ ಔಷಧಿಯನ್ನು ಬಳಸಲು ಶಿಫಾರಸ್ತು ಮಾಡಿದೆ. * ಗೋವಾ ಸರ್ಕಾರವು ಕೋವಿಡ್-19 ಸೋಂಕಿನೊಂದಿಗೆ ಬರುವ ವೈರಲ್ ಜ್ವರವನ್ನು ತಡೆಗಟ್ಟಲು ಇದನ್ನು ಬಳಸಲು ಶಿಫಾರಸ್ಸು ಮಾಡಲಾಗಿದೆ. * ಪ್ರಸ್ತುತ ಐವರ್ಮೆಕ್ಟಿನ್'ನ ನಿರಂತರ ಬಳಸುವುದರಿಂದ COVID-19'ನ್ನು ಕೊನೆಗೊಳಿಸುತ್ತದೆ ಎಂದು ಪೀರ್-ರಿವ್ಯೂಡ್ ಸಂಶೋಧನೆಯೊಂದು ಹೇಳಿದೆ ಎಂದು ಯುಎಸ್ ಸರ್ಕಾರಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ 3 ವಿಜ್ಞಾನಿಗಳು ವಿಮರ್ಶೆಯನ್ನು ಮಾಡಿದ್ದಾರೆ. * ಕೋವಿಡ್-19 ಚಿಕಿತ್ಸೆಗೆ ಐವರ್ಮೆಕ್ಟಿನ್'ನ್ನು ಬಳಕೆ ಮಾಡುವದರ ವಿರುದ್ಧ ಜರ್ಮನಿಯ ಆರೋಗ್ಯ ರಕ್ಷಣೆಯೂ ಎಚ್ಚರಿಕೆ ನೀಡಿದೆ ಎಂದು WHO ತಿಳಿಸಿದೆ, ಪ್ರಸ್ತುತ ಕ್ಲಿನಿಕಲ್ ಪರಿಣಾಮಕಾರಿತ್ವಕ್ಕೆ ಬೇಕಾಗುವಷ್ಟು ಅರ್ಥಪೂರ್ಣ(ಮಾಹಿತಿ) ಸಾಕ್ಷಿಗಳಿಲ್ಲದ ಕಾರಣ ಈ ಸಂಸ್ಥೆಗಳು ಔಷಧದ ವಿರುದ್ಧ ಎಚ್ಚರಿಕೆಯನ್ನು ನೀಡಿದೆ.