Job Description: * ಇತ್ತೀಚಿಗೆ 2021-22ನೇ ಸಾಲಿನ ತೋಟಗಾರಿಕೆಯ ಸಮಗ್ರ ಅಭಿವೃದ್ಧಿಗಾಗಿ ಮಿಷನ್'ಗಾಗಿ 2,250 ಕೋಟಿ ರೂ. ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ನೀಡಿದೆ. * ಭಾರತದಲ್ಲಿನ ತೋಟಗಾರಿಕಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಸಮಗ್ರ ಅಭಿವೃದ್ಧಿ ಮಿಷನ್ ಹೊಂದಿದೆ, ಪ್ರಸ್ತುತ ಹಣ್ಣುಗಳು, ತರಕಾರಿಗಳು, ಗೆಡ್ಡೆ ಬೆಳೆಗಳು, ಬೇರುಗಳು, ಹೂಗಳು, ಬಿದಿರು, ಕೋಕೋ, ತೆಂಗಿನಕಾಯಿ, ಮಸಾಲೆಗಳು, ಆರೊಮ್ಯಾಟಿಕ್ ಸಸ್ಯಗಳು ಹಾಗೂ ಗೋಡಂಬಿಗಳನ್ನು ಒಳಗೊಂಡ ಮಿಷನ್ ಇದಾಗಿದೆ. * ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್ಮೆಂಟ್ ಆಫ್ ಹಾರ್ಟಿಕಲ್ಚರ್ ಅಡಿಯಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಂಡಳಿಯು ವಿವಿಧ ಯೋಜನೆಗಳನ್ನು ಜಾರಿಗೆತರುತ್ತಿದೆ. * ತೋಟಗಾರಿಕಾ ಬೆಳೆಗಳ ಉತ್ಪಾದಕತೆ 2001ರಲ್ಲಿ ಹೆಕ್ಟೇರ್ಗೆ 8.8 ಟನ್ನಿಂದ 2019 ರಲ್ಲಿ ಹೆಕ್ಟೇರ್ಗೆ 12.3 ಟನ್ ಹೆಚ್ಚಳವಾಗಿದೆ. * 2011ರಲ್ಲಿನ ತೋಟಗಾರಿಕಾ ಬೆಳೆಗಳ ಪಾಲು 39% ಆಗಿತ್ತು, ಇದೀಗ 2019ರಲ್ಲಿ 42% ಬೆಳೆಗಳ ಪಾಲು ಏರಿಕೆಯಾಗಿದೆ. * ಭಾರತವು ಸರಿ ಸುಮಾರು 63,700 ಕೋಟಿ ತೋಟಗಾರಿಕಾ ಬೆಳೆಗಳನ್ನು 2019-20ರ ಅವಧಿಗೆ ರಫ್ತು ಮಾಡಲಾಗುತ್ತದೆ ಎಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ತಿಳಿಸಿದೆ.