Job Description: * ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜಿಂಗ್ ಮಾಡಿಕೊಳ್ಳಬಹುದಾದ ಕೇಂದ್ರಗಳನ್ನು ಕಡಿಮೆ ವೆಚ್ಚದಲ್ಲಿ ಶೀಘ್ರವೇ ಸ್ಥಾಪಿಸಲಾಗುವುದು ಎಂದು ತಿಳಿಸಿದೆ. * ಪ್ರಸ್ತುತ ನೀತಿ ಆಯೋಗವು ಪ್ರಕಟಣೆಯಲ್ಲಿ ತಿಳಿಸಿರುವ ಪ್ರಕಾರ ಕೈಗೆಟಕುವ ಬೆಲೆಯಲ್ಲಿ ಹಾಗೂ ದೇಶದಾದ್ಯಂತ ವಾಹನಗಳ ಚಾರ್ಜಿಂಗ್ಗೆ ಸಂಬಂಧಿಸಿದ ಮೂಲಸೌಕರ್ಯ ಹೆಚ್ಚಿಸಲಾಗುವುದು ಎಂದು ಮಾಹಿತಿಯನ್ನು ನೀಡಿದೆ. * ಪ್ರಸ್ತುತ "ಲೋ ಕಾಸ್ಟ್ ಎ.ಸಿ ಚಾರ್ಜ್ ಪಾಯಿಂಟ್'ಗಳನ್ನೂ ಆರಂಭಿಸುವದರಿಂದ 3 ಕಿಲೊವಾಟ್ (kw)ವರೆಗೆ ವಿದ್ಯುತ್ ಪೂರೈಕೆಆಗಲಿದೆ, ಇದರಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಇ-ಆಟೊಗಳನ್ನು ಚಾರ್ಜ್ ಮಾಡಬಹುದು. * ನೀತಿ ಆಯೋಗವು ಪಾರ್ಕಿಂಗ್ ಸ್ಥಳಗಳು, ಮಾಲ್ಗಳು, ಕಚೇರಿ, ಆಸ್ಪತ್ರೆ, ಕಿರಾಣಿ ಅಂಗಡಿಗಳಲ್ಲಿ ಚಾರ್ಜ್ ಪಾಯಿಂಟ್ ಡಿವೈಸ್ ಬಳಸಲಾಗುತ್ತದೆ ಇವುಗಳಿಂದ ವಾಹನಗಳನ್ನು ಚಾರ್ಜ ಮಾಡುವ ಉದ್ದೇಶ ಹೊಂದಿದೆ ಎಂದು ತಿಳಿಸಲಾಗಿದೆ.