Job Description: * ಪ್ರತಿ ವರ್ಷ ಅಂತರರಾಷ್ಟ್ರೀಯ ಚೆರ್ನೋಬಿಲ್ ವಿಪತ್ತು ನೆನಪಿನ ದಿನವನ್ನು ಏಪ್ರಿಲ್ 26ರಂದು ಆಚರಣೆ ಮಾಡಲಾಗುತ್ತದೆ. * ವಿಶ್ವಸಂಸ್ಥೆಯು 2016ರಲ್ಲಿ ಚೆರ್ನೋಬಿಲ್ ವಿಪತ್ತು ನೆನಪಿನ ದಿನವನ್ನು ಆಚರಿಸಲು ಪ್ರಾರಂಭಿಸಿತು. * 1986ರ ಪರಮಾಣು ದುರಂತದ 30ನೇ ವಾರ್ಷಿಕೋತ್ಸವದ ದಿನದಂದು ಮೊದಲು ಅಂತರರಾಷ್ಟ್ರೀಯ ಚೆರ್ನೋಬಿಲ್ ವಿಪತ್ತು ನೆನಪಿನ ದಿನವನ್ನು ಆಚರಣೆ ಮಾಡಲಾಯಿತು ಹಾಗೂ ಈ ದಿನವನ್ನು ಪರಮಾಣು ಶಕ್ತಿಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ಸಲುವಾಗಿ ಆಚರಿಸಲಾಗುತ್ತದೆ. * ಉಕ್ರೇನ್ನಲ್ಲಿರುವ ಚೆರ್ನೋಬಿಲ್ ಪರಮಾಣು ವಿದ್ಯುತ್ ಘಟಕವು 1986ರ ಏಪ್ರಿಲ್.26ರಂದು ಸ್ಫೋಟವನ್ನು ಅನುಭವಿಸಿತ್ತು, ಇದರಿಂದಾಗಿ ಉಕ್ರೇನ್, ರಷ್ಯಾ ಮತ್ತು ಬೆಲಾರಸ್ ಪ್ರದೇಶಗಳಲ್ಲಿನ ಮಕ್ಕಳು ಇಂದಿಗೂ ಥೈರಾಯ್ಡ್, ಕ್ಯಾನ್ಸರ್'ನಂತಹ ರೋಗಗಳನ್ನು ಎದುರಿಸುತ್ತ ಬದುಕುತ್ತಿದ್ದಾರೆ. ವಿಶ್ವಸಂಸ್ಥೆಯ ಬಗ್ಗೆ ಮಾಹಿತಿ : * ಪ್ರಧಾನ ಕಚೇರಿ- ನ್ಯೂಯಾರ್ಕ್ ನಗರ (ಅಂತರರಾಷ್ಟ್ರೀಯ ಪ್ರದೇಶ) * ಅಧಿಕೃತ ಭಾಷೆಗಳು- ಅರೇಬಿಕ್; ಚೈನೀಸ್; ಆಂಗ್ಲ; ಫ್ರೆಂಚ್; ರಷ್ಯನ್; ಸ್ಪ್ಯಾನಿಷ್ * ಮಾದರಿ- ಅಂತರ್ ಸರ್ಕಾರಿ ಸಂಸ್ಥೆ * ಸದಸ್ಯತ್ವ - 193 ಸದಸ್ಯ ರಾಷ್ಟ್ರಗಳು * ವೀಕ್ಷಕ ರಾಜ್ಯಗಳು- 2 ವಿಶ್ವಸಂಸ್ಥೆಯ ನಾಯಕರು : * ಕಾರ್ಯದರ್ಶಿ- ಜನರಲ್ಆಂಟೋನಿಯೊ ಗುಟೆರೆಸ್. * ಉಪ ಪ್ರಧಾನ ಕಾರ್ಯದರ್ಶಿ- ಅಮಿನಾ ಜೆ. ಮೊಹಮ್ಮದ್. * ಜನರಲ್ ಅಸೆಂಬ್ಲಿ ಅಧ್ಯಕ್ಷ- ಟಿಜ್ಜಾನಿ ಮುಹಮ್ಮದ್-ಬಂಡೆ. * ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಅಧ್ಯಕ್ಷ - ಮೋನಾ ಜುಲ್ * ಭದ್ರತಾ ಮಂಡಳಿ ಅಧ್ಯಕ್ಷ - ಡ್ಯಾಂಗ್ ದಿನ್ಹ್ ಕ್ವಿ