Job Description: * 2021ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಕಾರ್ಯಕ್ರಮವು ಲಾಸ್ ಆಂಜಲೀಸ್ನಲ್ಲಿ ಇತ್ತೀಚಿಗೆ ಜರುಗಿದೆ. * 2021ನೇ ಸಾಲಿನ ಅತ್ಯುತ್ತಮ ಚಿತ್ರದ ಆಸ್ಕರ್ ಪ್ರಶಸ್ತಿಯನ್ನು ನೋಮ್ಯಾಡ್ ಲ್ಯಾಂಡ್ ಚಿತ್ರವು ಪಡೆದುಕೊಂಡಿದೆ. * ಆಂಟೋನಿ ಹಾಪ್ಕಿನ್ಸ್ ನಟಿಸಿರುವ ದಿ ಫಾದರ್ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಹಾಗೂ ಫ್ರಾನ್ಸಸ್ ಮ್ಯಾಕ್ಡೋರ್ಮಂಡ್ ಅವರಿಗೆ ನೋಮ್ಯಾಡ್ ಲ್ಯಾಂಡ್ ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ನೋಮ್ಯಾಡ್ ಲ್ಯಾಂಡ್ ಚಿತ್ರದ ನಿರ್ದೇಶನಕ್ಕಾಗಿ ಕೋಯಿ ಜಾವ್ ಅವರು ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ, ಮೂಲತಃ ಇವರು ಚೀನಾದವರಾಗಿದ್ದು, ಹಾಗೂ ಈ ಆಸ್ಕರ್ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ನಿರ್ದೇಶಕಿಯಾಗಿ ಹೊರ ಹೊಮ್ಮಿದ್ದಾರೆ. * ಆಸ್ಕರ್ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಪ್ರತೀ ವರ್ಷ ನಿಧನರಾಗುವ ಜನಪ್ರಿಯ ಸೆಲೆಬ್ರಿಟಿಗಳನ್ನು ನೆನೆಪಿಸಿಕೊಳ್ಳಲಾಗುತ್ತದೆ, ಕಳೆದ ವರ್ಷ ನಿಧನರಾದ ಇರ್ಫಾನ್ ಖಾನ್ ಮತ್ತು ಭಾನು ಅಥಯ್ಯ ಅವರನ್ನು ಇನ್ ಮೆಮೋರಿಯಮ್ ಎಂಬ ವಿಭಾಗದಲ್ಲಿ ನೆನೆಪಿಸಿಕೊಂಡಿದ್ದಾರೆ. * ಗಾಂಧಿ ಚಿತ್ರದ ವಸ್ತ್ರ ವಿನ್ಯಾಸ ಮಾಡಿದ್ದಕ್ಕಾಗಿ ಭಾನು ಅಥಯ್ಯ ಅವರಿಗೆ ಪ್ರಶಸ್ತಿ ಲಿಬಿಸಿದೆ ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯರಾಗಿದ್ದಾರೆ.