Job Description: * ಉಲ್ಕೆಗಳು ಹಾಗೂ ಕ್ಷುದ್ರ ಗ್ರಹಗಳಿಂದ ಪ್ರತಿ ವರ್ಷ ಭೂಮಿ ಮೇಲೆ 5,000 ಟನ್ಗಳಷ್ಟು ಧೂಳು ಬೀಳುತ್ತಲಿದೆ ಎಂದು ವಿಜ್ಞಾನಿಗಳು ಇತ್ತೀಚಿಗೆ ಮಾಹಿತಿಯನ್ನು ನೀಡಿದ್ದಾರೆ. * ಫ್ರಾನ್ಸ್ನ ರಾಷ್ಟ್ರೀಯ ವಿಜ್ಞಾನ ಸಂಶೋಧನಾ ಕೇಂದ್ರ, ಪ್ಯಾರಿಸ್ನ ಸಾಕ್ಲೇ ವಿವಿ ಹಾಗೂ ರಾಷ್ಟ್ರೀಯ ಪರಿಸರ ಇತಿಹಾಸ ಸಂಗ್ರಹಾಲಯ ಜಂಟಿಯಾಗಿ 20 ವರ್ಷಗಳ ಕಾಲ ಅಧ್ಯಯನ ನಡೆಸುವ ಮೂಲಕ ಈ ಮಾಹಿತಿಯನ್ನು ತಿಳಿಸಿದ್ದಾರೆ. * ರಾಷ್ಟ್ರೀಯ ವಿಜ್ಞಾನ ಸಂಶೋಧನಾ ಕೇಂದ್ರದ ಸಂಶೋಧಕ ಜೀನ್ ಡುಪಾರ್ಟ್ ರವರು ಕಳೆದ 2 ದಶಕಗಳ ಅವಧಿಯಲ್ಲಿ ಉಲ್ಕಾಶಿಲೆಗಳ ಧೂಳಿನ ಕಣಗಳನ್ನು ಕಲೆಹಾಕಿ ಅಧ್ಯಯನ ಮಾಡುವ ಸಲುವಾಗಿ ಅಂಟಾರ್ಕ್ಟಿಕಾದಲ್ಲಿರುವ ಫ್ರಾಂಕೋ-ಇಟಾಲಿಯಾ ಕಾಂಕಾರ್ಡಿಯಾ ಕೇಂದ್ರಕ್ಕೆ 6 ಬಾರಿ ಭೇಟಿ ನೀಡಿದ್ದಾರೆ. ರಾಷ್ಟ್ರೀಯ ವಿಜ್ಞಾನ ದಿನ : * ಸಿ ವಿ ರಾಮನ್ ಅವರು ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊತ್ತಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು, ಇವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್, 1888 ರ ನವೆಂಬರ್ 7 ರಂದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಜನಿಸಿದರು. * 1928 ರ ಫೆಬ್ರವರಿ 28 ರಂದು ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ. ವಿ. ರಾಮನ್ ಅವರ 'ರಾಮನ್ ಪರಿಣಾಮ'ದ ಆವಿಷ್ಕಾರವನ್ನು ಗುರುತಿಸಲು ಪ್ರತಿ ವರ್ಷ ಫೆಬ್ರವರಿ 28 ರಂದು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. * ಅವರ ಈ ಆವಿಷ್ಕಾರಕ್ಕಾಗಿ 1930 ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಯಿತು.