Job Description: * ಈ ಹಿಂದೆ ವಿವಿಧ ದೇಶಗಳ 53 ಕೋಟಿ ಫೇಸ್ ಬುಕ್ ಬಳಕೆದಾರರ ದತ್ತಾಂಶ ಸೋರಿಕೆಯಾಗಿರುವ ಕುರಿತು ವರದಿಯಾಗಿತ್ತು, ಇದಾದ ಬಳಿಕ ಮತ್ತೆ ಇದೀಗ ಲಿಂಕ್ಡ್ ಇನ್ (LinkedIn) ಬಳಕೆ ಮಾಡುತ್ತಿರುವ ಸುಮಾರು 50 ಕೋಟಿ ಜನಗಳ ಮಾಹಿತಿ (ಡೇಟಾ) ಸೋರಿಕೆ ಆಗಿದೆ ಎಂದು ತಿಳಿದು ಬಂದಿದೆ. * ಇದೀಗ ಭಾರತ ಸೇರಿ ವಿವಿಧ ದೇಶಗಳ ಜನರು ಬಳಸುವ ಅಂತರ್ಜಾಲತಾಣವಾಗಿರುವ ಲಿಂಕ್ಡ್ ಇನ್ 50 ಕೋಟಿ ಬಳಕೆದಾರರ ಇಮೇಲ್, ಫೋನ್ ನಂಬರ್, ಉದ್ಯೋಗ ಸೇರಿದಂತೆ ಖಾಸಗಿ ಮಾಹಿತಿ ಸೋರಿಕೆಯಾಗಿದೆ ಎಂದು ತಿಳಿಸಲಾಗಿದೆ. * ಈ ಲಿಂಕ್ಡ್ ಇನ್ ಜಾಲತಾಣವು ಮೈಕ್ರೋಸಾಫ್ಟ್ ಒಡೆತನದಲ್ಲಿದೆ ಈ ಜಾಲತಾಣದ ಮೂರನೇ ಎರಡರಷ್ಟು ಬಳಕೆದಾರರ ಮಾಹಿತಿ ಡಾರ್ಕ್ ವೆಬ್'ನಲ್ಲಿ ಖರೀದಿಗೆ ಸಿಗಲಿದೆ ಎಂದು ತಿಳಿದು ಬಂದಿದೆ.