Job Description: * ಉತ್ತರಾಖಂಡ ರಾಜ್ಯ ಸರ್ಕಾರವು ಇದೀಗ 51 ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಸರ್ಕಾರಗಳ ನಿಯಂತ್ರಣವನ್ನು ಹಿಂಪಡೆದಿದೆ, ಈ ಮೂಲಕ ಉತ್ತರಾಖಂಡ ರಾಜ್ಯದ ಜನಗಳ ಬಹುದಿನಗಳ ಬೇಡಿಕೆ ಈಡೇರಿದೆ ಎನ್ನಲಾಗಿದೆ. * ಉತ್ತರಾಖಂಡ ರಾಜ್ಯದ ದೇವಸ್ಥಾನಗಳಾದ ಬದ್ರಿನಾಥ, ಕೇದಾರನಾಥ, ಗಂಗೋತ್ರಿ ಹಾಗೂ ಯಮುನೋತ್ರಿಗಳೂ ಸೇರಿದಂತೆ ಒಟ್ಟಾರೆ 51 ಪುಣ್ಯಕ್ಷೇತ್ರಗಳ ಮೇಲಿನ ನಿಯಂತ್ರಣವನ್ನು ರಾಜ್ಯ ಸರ್ಕಾರವು ಕೈ ಬಿಟ್ಟಿದೆ ಎಂದು ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ತಿಳಿಸಿದರು. ಉತ್ತರಾಖಂಡ ರಾಜ್ಯದ ಬಗ್ಗೆ ಮಾಹಿತಿ : * ಉತ್ತರಾಖಂಡ ಮೊದಲಿನ ಹೆಸರು ಉತ್ತರಾಂಚಲ, ಭಾರತ ಗಣರಾಜ್ಯದ 27 ನೆಯ ರಾಜ್ಯವನ್ನಾಗಿ 2000 ರ ನವೆಂಬರ್ 9 ರಂದು ರಚಿಸಲಾಯಿತು. * ರಾಜ್ಯದ ಹೆಸರನ್ನು 2007ರ ಜನವರಿಯಲ್ಲಿ ಉತ್ತರಾಂಚಲದಿಂದ ಉತ್ತರಾಖಂಡವೆಂದು ಬದಲಿಸಲಾಯಿತು * ರಾಜಧಾನಿ : ಡೆಹ್ರಾಡೂನ್ * ಜನಸಂಖ್ಯೆ : 84,79,562 (2001ರ ಪ್ರಕಾರ) * ರಾಜ್ಯಪಾಲ : ಸುದರ್ಶನ್ ಅಗರ್ವಾಲ್ * ಮುಖ್ಯ ಮಂತ್ರಿ : ಬಿ.ಸಿ.ಖಂಡೂರಿ