Job Description: ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ NASA ಉಡಾಯಿಸಿದ ರೋವರ್ ಇದೆ ಫೆಬ್ರವರಿ 18 ರಂದು ಮಂಗಳ ಗ್ರಹ ತಲುಪಿದ್ದು, ಈ ಪರ್ಸವೆರೆನ್ಸ್ ರೋವರ್ನ ಕೆಳಭಾಗದಲ್ಲಿ ಅಳವಡಿಸಲಾಗಿದ್ದ, ಮಿನಿ-ಹೆಲಿಕಾಪ್ಟರ್ ಇತ್ತೀಚಿಗೆ ಮಂಗಳನ ನೆಲದಮೇಲೆ ಇಳಿದಿದೆ. * 47 ಕೋಟಿ ಕಿಲೋಮೀಟರ್ ದೂರವನ್ನು ನಾಸಾದ ಪರ್ಸವೆರೆನ್ಸ್ ರೋವರ್ ಪ್ರಯಾಣಿಸಿದೆ. * ಪರ್ಸವೆರೆನ್ಸ್ ರೋವರನೊಳಗಿದ್ದ ಈ ಮಿನಿ ಹೆಲಿಕಾಪ್ಟರ್ ಇನ್ನು ತನ್ನದೇ ಸ್ವಂತ ಬ್ಯಾಟರಿ ನೆರವಿನಿಂದ ಕಾರ್ಯನಿರ್ವಹಿಸಬೇಕಿದ್ದು, ಮಂಗಳ ಗ್ರಹದ ತಾಪಮಾನ ರಾತ್ರಿ ಸಮಯದಲ್ಲಿ ಮೈನಸ್ 90 ಡಿಗ್ರಿ ಸೆಲ್ಸಿಯಸ್ನಷ್ಟು ಕುಸಿಯುವ ಕಾರಣ ಇದರಲ್ಲಿರುವ ಹೀಟರ್ ಹೆಲಿಕಾಪ್ಟರ್ಗೆ 7 ಡಿಗ್ರಿಗಳಷ್ಟು ತಾಪಮಾನವನ್ನು ಒದಗಿಸುತ್ತದೆ. * ಈ ಹೆಲಿಕಾಪ್ಟರ್ ಈ ತಿಂಗಳ 11 ರಂದು ತನ್ನ ಮೊದಲ ಹಾರಾಟ ನಡೆಸುವ ಮೂಲಕ ಅಧ್ಯಯನ ಆರಂಭಿಸಲಿದೆ.