Job Description: * ಅಬುದಾಬಿಯಲ್ಲಿ ಸರಿ ಸುಮಾರು 880 ಕೋಟಿ ರೂ. ವೆಚ್ಚದಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತು ಹಾಗೂ ಇದು ಏಪ್ರಿಲ್ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ ತಿಳಿದು ಬಂದಿದೆ. * ಅಬುದಾಬಿಯ ಅಬುಮುರೇಖಾ ನಗರದ 27 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಹಿಂದೂ ದೇವಾಲಯದ ಕಾಮಗಾರಿ ಭರದಿಂದ ಸಾಗಿದೆ ಎಂದು ತಿಳಿದು ಬಂದಿದೆ. * ಈ ಹಿಂದೂ ದೇವಾಲಯವು ಭೂಮಿ ಮಟ್ಟದಿಂದ 4.5 ಮೀಟರ್ ಎತ್ತರದ ಅಡಿಪಾಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಬುಧಾಬಿಯ ಬಿಎಪಿಎಸ್ ಯೋಜನಾ ಇಂಜಿನಿಯರ್ ಮಾಹಿತಿಯನ್ನು ನೀಡಿದ್ದಾರೆ. * ಈ ಹಿಂದೂ ದೇವಾಲಯ ನಿರ್ಮಾಣಕ್ಕಾಗಿ ಕಾಮಗಾರಿಗಳಿಗೆ ರಾಜಸ್ಥಾನನಿಂದ ಗುಲಾಬಿ ಕಲ್ಲುಗಳು ಮತ್ತು ಗುಜರಾತನಿಂದ ಕಲ್ಲುಗಳನ್ನು ತರಲಾಗಿದೆ, ಇಟಲಿಯ ಮ್ಯಾಸಿಡೋನಿಯಾದಿಂದ ಅಮೃತಶಿಲೆ ಕಲ್ಲುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ. * ಈ ದೇವಾಲಯದ ನಿರ್ಮಾಣದ ಕಾರ್ಯಗಳಲ್ಲಿ 2000 ವಾಸ್ತುಶಿಲ್ಪಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.