Job Description: * 2019ರ ಜೂನ್ ತಿಂಗಳಲ್ಲಿ 'ಮಿಷನ್ ಗಗನ್ ಯಾನ್'ಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ರಷ್ಯಾ ರಾಷ್ಟ್ರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. * ಮಿಷನ್ ಗಗನಯಾನಕ್ಕಾಗಿ ಒಟ್ಟು 4 ಭಾರತೀಯ ಗಗನಯಾತ್ರಿಗಳು ಮಾನವ ಸಹಿತ ಬಾಹ್ಯಾಕಾಶ ಯಾನಕ್ಕಾಗಿ ರಷ್ಯಾದಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಲಾಗಿದೆ. * ಮಿಷನ್ ಗಗನಯಾನ ಯೋಜನೆಗೆ ಆಯ್ಕೆಯಾದ 4 ಭಾರತೀಯ ಗಗನಯಾತ್ರಿ ಅಧಿಕಾರಿಗಳಿಗೆ ಮಾಸ್ಕೋ ಬಳಿ ಇರುವ ಜ್ವಿಯೊಜ್ಡ್ನಿ ಗೊರೊಡೋಕ್ ನಗರದ ಬಳಿ 1 ವರ್ಷಗಳ ಕಾಲ ತರಬೇತಿ ನೀಡಲಾಗಿದೆ ಎಂದು ತಿಳಿದು ಬಂದಿದೆ. * ರಷ್ಯಾದ ಸರ್ಕಾರಿ ಬಾಹ್ಯಾಕಾಶ ಸಹಕಾರ ಸಂಸ್ಥೆಯ ಮುಖ್ಯಸ್ಥ ಡಿಮಿಟ್ರಿ ರೋಗೊಜಿನ್'ರವರು ಮಿಷನ್ ಗಗನ್ ಯಾನ್'ಕ್ಕಾಗಿ ತರಬೇತಿ ಪಡೆದಿರುವ ಭಾರತೀಯ ಗಗನಯಾನಿಗಳನ್ನು ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರ ಭೇಟಿ ಮಾಡಿದೆ ಎಂದು ತಿಳಿಸಿದ್ದಾರೆ.