Job Description: * ದಕ್ಷಿಣ ಭಾರತದಲ್ಲೇ ಎರಡು ರನ್ವೇ ಗಳನ್ನೂ ಹೊಂದಿರುವ ಮೊದಲ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮೆಚ್ಚುಗೆಗೆ ಪಾತ್ರವಾಗಿದೆ. * ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉತ್ತರ ರನ್ವೇಯನ್ನು ಜೂನ್ 22. 2020 ರಿಂದ ಕಾಮಗಾರಿಯನ್ನು ನಡೆಸಲಾಗುತ್ತಿತ್ತು ಇದೀಗ ಮಾರ್ಚ್ 25ರಂದು ಈ ಉತ್ತರ ರನ್ವೇ ಬಳಕೆಗೆ ಸಿಗಲಿದೆ ಎಂದು ತಿಳಿದು ಬಂದಿದೆ. * 2019ರಲ್ಲಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣವು, ನಿಲ್ದಾಣದ ಪ್ರದೇಶದ ಹವಾಮಾನ ಪರಿಸ್ಥಿತಿ ಅಧ್ಯಯನ ಮಾಡಲು ಜವಾಹರ್ಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. * ಕ್ಯಾಟ್-3ಬಿ ರನ್ವೇ ಹೊಂದಿರುವ ದಕ್ಷಿಣ ಭಾರತದ ಏಕೈಕ ಹಾಗೂ ಪ್ರಸ್ತುತ ದೇಶದ 6ನೇ ವಿಮಾನ ನಿಲ್ದಾಣವಾಗಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣವು ಹೊರಹೊಮ್ಮಿದೆ.