Job Description: * ವಿಶ್ವಸಂಸ್ಥೆಯು 2021ರ ವಿಶ್ವ ಸಂತೋಷ ವರದಿಯನ್ನು ಪ್ರಕಟಿಸಿದೆ, ಈ ಪಟ್ಟಿಯಲ್ಲಿ ಒಟ್ಟು 149 ದೇಶಗಳು ಸ್ಥಾನ ಪಡೆದಿವೆ. * ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರಗಳ ನೆಟ್ ವರ್ಕ್ ಅಡಿಯಲ್ಲಿ ವಿಶ್ವದ 149 ರಾಷ್ಟ್ರಗಳು ತಮ್ಮ ನಾಗರಿಕರು ತಾವು ಎಷ್ಟು ಸಂತೋಷವಾಗಿದ್ದರೆ ಎನ್ನುವ ಪಟ್ಟಿಯನ್ನು ಬಿಡುಗಡೆ ಮಾಡಿದೆ. * 2021ರ ವಿಶ್ವ ಸಂತೋಷ ವರದಿಯ ಪ್ರಕಾರ ಫಿನ್ಲ್ಯಾಂಡ್ ಜಗತ್ತಿನ ಅತ್ಯಂತ ಸಂತೋಷದಿಂದ ತುಂಬಿರುವ ದೇಶ ಎಂಬ ಹೆಗ್ಗಳಿಕೆ ಮತ್ತು ಈ ದೇಶ ಪ್ರಥಮ ಸ್ಥಾನ ಪಡೆದಿದೆ. * ವಿಶ್ವ ಸಂತೋಷ 2021ರ ವರದಿಯ ಪ್ರಕಾರ ಭಾರತ 139ನೇ ಸ್ಥಾನ ಪಡೆದಿದೆ, ಈ ಹಿಂದೆ ಭಾರತವು 2019ರಲ್ಲಿ ಭಾರತ 140ನೇ ಸ್ಥಾನ ಪಡೆದುಕೊಂಡಿತ್ತು. * ಚೀನಾ 84ನೇ ಸ್ಥಾನ ಮತ್ತು ಪಾಕಿಸ್ತಾನ 105ನೇ, ಬಾಂಗ್ಲಾದೇಶ 101ನೇ ಸ್ಥಾನ ಪಡೆದುಕೊಂಡಿವೆ. * ಅತ್ಯಂತ ದುಃಖಿತವಾಗಿರುವ ದೇಶ ವೆಂದರೆ ಅದುವೇ ಆಫ್ಘಾನಿಸ್ತಾನ, ಇದು ಯುದ್ಧಪೀಡಿತ ದೇಶವಾಗಿದೆ ಎಂದು ವರದಿ ಮಾಹಿತಿಯನ್ನು ನೀಡಿದೆ.