Job Description: * ಕೇಂದ್ರ ಸರ್ಕಾರವು ಗೂಗಲ್'ಗೆ ಪರ್ಯಾವಾಗಿ ದೇಶಿ ಮೊಬೈಲ್ ಸೇವಾ ಆಪ್ ಸ್ಟೋರ್ ಆಪ್ ಬಿಡುಗಡೆ ಮಾಡಿದೆ. * ಕೇಂದ್ರ ಸರ್ಕಾರವು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮೊಬೈಲ್ ಸೇವಾ ಆಪ್ ಸ್ಟೋರ್ ಆಪ್ ಅನ್ನು ಬಿಡುಡಗೆ ಮಾಡಿದೆ, ಇದರಿಂದ ಗೂಗಲ್, ಆಪಲ್ ಮೊದಲಾದ ಕಂಪನಿಗಳಿಗೆ ಕೊಂಚ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ. * ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್'ರವರು ರಾಜ್ಯಸಭೆಯಲ್ಲಿ ಈ ನೂತನ ಮೊಬೈಲ್ ಸೇವಾ ಆಪ್ ಸ್ಟೋರ್ ಆಪ್'ನ ಬಳಕೆ ಮತ್ತು ಮಾಹಿತಿಯನ್ನು ನೀಡಿದರು. * ಕೇಂದ್ರ ಸರ್ಕಾರದ ಈ ಆಪ್ ಬಳಕೆಯಿಂದ ಗೂಗಲ್, ಪ್ಲೇ ಸ್ಟೋರ್'ನ ಅವಲಂಬನೆಯನ್ನು ಕಡಿಮೆ ಮಾಡಬಹುದಾಗಿದೆ, ಮತ್ತು ಮೇಕ್ ಇನ್ ಇಂಡಿಯಾಗೆ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.