Job Description: * ಭಾರತೀಯ ರಕ್ಷಣಾ ಇಲಾಖೆಯು ಸೇನೆಯ ದಾಳಿ ಸಾಮರ್ಥ್ಯವನ್ನು ಹೆಚ್ಚಿಸಲು, ಭಾರತ್ ಡೈನಾಮಿಕ್ಸ್ ಲಿ. (BDL) ಜೊತೆಗೆ 4,960 ಮಿಲಾನ್-2ಟಿ ಆಯಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿ ಗಳನ್ನು ಖರೀದಿಸುವ 1,188 ಕೋಟಿ ರೂ.ಗಳ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. * ಭಾರತ್ ಡೈನಾಮಿಕ್ಸ್ ಲಿ. ಮುಂದಿನ 3ವರ್ಷಗಳಲ್ಲಿ ಭೂ ಸೇನೆಗೆ ಮಿಲಾನ್-2ಟಿ ಕ್ಷಿಪಣಿಗಳನ್ನು ನೀಡಲಿದೆ. * ಫ್ರಾನ್ಸ್ನ MBDA ಮಿಸೈಲ್ ಸಿಸ್ಟಂನಿಂದ ಅನುಮತಿಯನ್ನು ಪಡೆದು ಮಿಲಾನ್-2ಟಿಯನ್ನು ಭಾರತದಲ್ಲಿ ಪರೀಕ್ಷೆ ಮಾಡಲಾಗಿದೆ. * ಈ ಮಿಲಾನ್-2ಟಿ ಕ್ಷಿಪಣಿಯು ವೈರಿ ಟ್ಯಾಂಕರ್ಗಳನ್ನು ದೂರದಿಂದಲೇ ನಾಶಗೊಳಿಸುವ ಶಕ್ತಿಯನ್ನು ಹೊಂದಿದೆ, ಈ ಕ್ಷಿಪಣಿಯು ಒಂದು ಪ್ರದೇಶ ದಿಂದ ಬೇರೊಂದು ಪ್ರದೇಶಕ್ಕೆ ಸುಲಭವಾಗಿ ಸಾಗಿಸಬಹುದಾಗಿದೆ. * ಇದು ಪೋರ್ಟಬಲ್ ಕ್ಷಿಪಣಿ ಆಗಿದೆ, ಇದನ್ನು ಟ್ಯಾಂಕರ್ ಅಥವಾ ನೆಲದ ಮೇಲಿಂದ ಉಡಾಯಿಸಬಹುದು ಎಂದು ಭಾರತ್ ಡೈನಾಮಿಕ್ಸ್ ಲಿ. ತಿಳಿಸಿದೆ.