Job Description: * ಇಟಲಿ ಅಂತರರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಸೇರಲು ಮಾರ್ಚ್ 17, 2021ರಂದು ಭಾರತದೊಂದಿಗೆ ಚೌಕಟ್ಟಿನ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. * 2021ರ ಜನವರಿ 8 ರಿಂದ ಜಾರಿಗೆ ತರಲಾದ ISAನ ಚೌಕಟ್ಟಿನ ಒಪ್ಪಂದಕ್ಕೆ ತಿದ್ದುಪಡಿ ಮಾಡಿದ ಬಳಿಕ ಇಟಲಿಯ ರಾಯಭಾರಿ ವಿನ್ಸೆಂಜೊ ಡಿ ಲುಕಾ ಈ ಒಪ್ಪಂದಕ್ಕೆ ಸಹಿ ಹಾಕಿದರು. * ವಿಶ್ವಸಂಸ್ಥೆಯ ಎಲ್ಲ ಸದಸ್ಯರಿಗೆ ಸೌರ ಒಕ್ಕೂಟದಲ್ಲಿ ಸದಸ್ಯತ್ವವನ್ನು ನೀಡಲಾಗಿದೆ. * ಮಾರ್ಚ್ 17, 2021 ರಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶಿಂಗ್ಲಾರವರು ಇಟಲಿಯ ರಾಯಭಾರಿ ವಿನ್ಸೆಂಜೊ ಡಿ ಲುಕಾ ಅವರನ್ನು ಭೇಟಿ ಮಾಡಿದ್ದರು. ಪರಿಣಾಮ ಇಟಲಿಯನ್ನು ಅಂತರರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಪ್ರವೇಶಿಸುವುದನ್ನು ಭಾರತೀಯ ಕಾರ್ಯದರ್ಶಿ ಸ್ವಾಗತಿಸಿದರು. * ಅಂತರರಾಷ್ಟ್ರೀಯ ಸೌರ ಒಕ್ಕೂಟ(ISA) ಪ್ರಸ್ತುತ 121 ದೇಶಗಳನ್ನು ಒಳಗೊಂಡ ಒಪ್ಪಂದದ ಅಂತರ್ ಸರ್ಕಾರಿ ಮೈತ್ರಿಕೂಟವಾಗಿದೆ, ಹಾಗೂ ಮೈತ್ರಿಯ ಸ್ಥಾಪನೆಯನ್ನು ಭಾರತ ಪ್ರಾರಂಭಿಸಿತು. * ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸೌರಶಕ್ತಿಯ ಸಮರ್ಥ ಬಳಕೆಗಾಗಿ ಕೆಲಸ ಮಾಡುವ ಉದ್ದೇಶದಿಂದ ISA ಕಾರ್ಯನಿರ್ವಹಿಸುತ್ತದೆ.