Job Description: * ಅಮೇರಿಕ ರಾಷ್ಟ್ರವು ಚೀನಾ ಮತ್ತು ಹಾಂಗ್ಕಾಂಗ್ನ 24 ಅಧಿಕಾರಿಗಳ ಮೇಲೆ ನಿರ್ಬಂಧ ಹೇರಿದೆ. * ಚೀನಾ ಹಾಗೂ ಹಾಂಗ್ಕಾಂಗ್ ರಾಷ್ಟ್ರಗಳು ರಾಷ್ಟ್ರೀಯ ಭದ್ರತಾ ಕಾಯ್ದೆ ಮೂಲಕ ಪ್ರಜಾಪ್ರಭುತ್ವ ಪರ ಹೋರಾಟ ಹತ್ತಿಕ್ಕುವುದನ್ನು ಸತತವಾಗಿ ಮುಂದುವರಿಸಿರುವ ಕಾರಣದಿಂದಾಗಿ ಈ ರಾಷ್ಟ್ರಗಳಿಗೆ ಸೇರಿದ 24 ಅಧಿಕಾರಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದೆ. * 24 ಪ್ರಮುಖ ಅಧಿಕಾರಿಗಳ ಮೇಲೆ ನಿರ್ಬಂಧವನ್ನು,ಹಾಂಗ್ಕಾಂಗ್ ಸ್ವಾಯತ್ತತೆ ಕಾಯ್ದೆ ಅಡಿಯಲ್ಲಿ ಹೇರಲಾಗಿದೆ ಎಂದು ಅಮೇರಿಕ ವಾಷಿಂಗ್ಟನ್ನಲ್ಲಿ ಮಾಹಿತಿಯನ್ನು ನೀಡಿದೆ. * ಈ ಮೊದಲು 1997ರಲ್ಲಿ ಬ್ರಿಟನ್ ವಶದಲ್ಲಿದ್ದ ಹಾಂಗ್ಕಾಂಗ್'ನ್ನು ಚೀನಾಕ್ಕೆ ಹಸ್ತಾಂತರ ಮಾಡಲಾಯಿತು. * ಹಾಂಗ್ಕಾಂಗ್ನಲ್ಲಿ ವಿವಾದಾತ್ಮಕ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿರುವ ಹಿನ್ನಲೆಯಿಂದ ಹಾಂಗ್ಕಾಂಗ್ನ ಚುನಾವಣಾ ವ್ಯವಸ್ಥೆ ದುರ್ಬಲಗೊಳ್ಳುತ್ತದೆ ಎಂದು ಪರಿಗಣಿಸಿ ಹಾಂಗ್ಕಾಂಗ್ ಸ್ವಾಯತ್ತತೆ ಕಾಯ್ದೆಅಡಿಯಲ್ಲಿ ನಿರ್ಬಂಧ ಹೇರಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟೊನಿ ಬ್ಲಿಂಕೆನ್ ತಿಳಿಸಿದ್ದಾರೆ.